'ಗೋ ಕರೊನಾ...' ಎಂದ್ರೂ ಬಿಡಲಿಲ್ಲ ಸೋಂಕು; ಆಸ್ಪತ್ರೆಗೆ ದಾಖಲಾದ ಕೇಂದ್ರ ಸಚಿವ

Ramdas Atavale
Published on

ಮುಂಬೈ: ಕೇಂದ್ರ ಸಚಿವ ರಾಮದಾಸ್​ ಅಠಾವಳೆ ಅವರಿಗೆ ಕರೊನಾ ಸೋಂಕು ತಗುಲಿದ್ದು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ರಾಮದಾಸ್​ ಅವರು ಫೆಬ್ರವರಿಯಲ್ಲಿಯೇ ' ಗೋ ಕರೊನಾ.. ಗೋ ಕರೊನಾ' ಎಂಬ ಮಂತ್ರ ಪಠಿಸಿ ಭರ್ಜರಿ ಸುದ್ದಿಯಾಗಿದ್ದರು. ಮುಂಬೈನಲ್ಲಿನ ಚೀನಾ ರಾಯಭಾರಿ ಟ್ಯಾಂಗ್ ಗುಯೊಕೈ ಮತ್ತು ಬೌದ್ಧ ಭಿಕ್ಷುಗಳೊಂದಿಗೆ ಸೇರಿ ಪ್ರಾರ್ಥನಾ ಸಭೆ ನಡೆಸಿದ ವೇಳೆ, ಗೋ ಕರೊನಾ ಎಂದು ಪಠಿಸಿದ್ದರು. ಆ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿತ್ತು.

ಅಠಾವಳೆ ಅವರಿಗೆ 60 ವರ್ಷವಾಗಿದ್ದು, ಡಯಾಬಿಟಿಕ್​ ಇದೆ ಎಂದು ಅವರ ಆಪ್ತಸಹಾಯಕ ತಿಳಿಸಿದ್ದಾರೆ. ಸೋಮವಾರವಷ್ಟೇ ಮುಂಬೈನಲ್ಲಿ ನಡೆದ ಒಂದು ಸಮಾರಂಭದಲ್ಲಿ ನಟಿ ಪಾಯಲ್​ ಘೋಷ್​ ಜತೆ ಪಾಲ್ಗೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net