

ಮುಂಬೈ: ರಾಮಾಯಣ ಒಂದು ಮಹಾಕಾವ್ಯ. ನಾವು ಈ ಮಹಾಕಾವ್ಯದಲ್ಲಿನ ಎಲ್ಲಾ ಪಾತ್ರಗಳನ್ನು ಮೊದಲ ಬಾರಿಗೆ ದೃಶ್ಯರೂಪದಲ್ಲಿ ದೂರದರ್ಶನದಲ್ಲಿ ಅಂದು ಪ್ರಸಾರವಾಗುತ್ತಿದ್ದ ರಾಮಾನಂದ ಸಾಗರ್ ಅವರ 'ರಾಮಾಯಣ'ದಲ್ಲಿ ನೋಡಿದ್ದೇವೆ. ಆ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರವರ್ಗಗಳು ನಮಗೆ ನೆನಪಿದೆ. ನಾವಿಲ್ಲಿ ಹೇಳುತ್ತಿರುವುದು ಸೀತಾ ಪಾತ್ರವನ್ನು ನಿರ್ವಹಿಸಿದ ದೀಪಿಕಾ ಚಿಖಾಲಿಯಾ( Dipika Chikhlia) ಅವರ ಕುರಿತು. ಹೌದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರನ್ನು ಪ್ರಸ್ತುತ ಸೆಟ್ಟೆರಿರುವ ರಾಮಾಯಣ ಸಿನಿಮಾದಲ್ಲಿ ಭಾಗವಾಗಲು ಬಯಸುತ್ತೀರಾ ಎಂದು ಕೇಳಲಾಗಿದೆ. ಅದಕ್ಕೆ ಅವರು ನೀಡಿರುವ ಪ್ರತಿಕ್ರಿಯೆಯೂ ಎಲ್ಲರ ಗಮನ ಸೆಳೆದಿದೆ.
ಇತ್ತೀಚೆರೆ ನಟಿ ದೀಪಿಕಾ ಚಿಖಾಲಿಯಾ ಅವರನ್ನು ರಣಬೀರ್ ಕಪೂರ್ ಅಭಿನಯಿಸುತ್ತಿರುವ ರಾಮಾಯಣದಲ್ಲಿ ಭಾಗವಾಗಲು ಇಷ್ಟವೇ ಎಂದು ಕೇಳಿದಾಗ ಅದರಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಅದರ ಹಿಂದಿನ ಕಾರಣವನ್ನು ತಿಳಿಸಿದ್ದಾರೆ. ಒಮ್ಮೆ ಧಾರಾವಾಹಿಯಲ್ಲಿ ಕೌಶಲ್ಯ ಪಾತ್ರವನ್ನು ಅವರಿಗೆ ನೀಡಲಾಗಿತ್ತು ಎಂದು ಹೇಳಿದರು. ಆದರೆ ನನ್ನ ಸಹೋದರ ನನಗೆ ನೀನು ಸೀತೆ ಎಂದು ಕರೆಯಲ್ಪಡುತ್ತೀಯ ಮತ್ತು ನೀನು ಸೀತೆಯಾಗಿಯೇ ಸಾಯಬೇಕು ಎಂದು ಹೇಳಿದನು. ಅದಕ್ಕಾಗಿಯೇ ಯಾವುದೇ ಮಹಾಕಾವ್ಯ ಚಿತ್ರದಲ್ಲಿ ಬೇರೆ ಯಾವುದೇ ಪಾತ್ರವನ್ನು ನಿರ್ವಹಿಸಲು ಆಸಕ್ತಿ ಹೊಂದಿಲ್ಲ ಎಂದಿದ್ದಾರೆ.
ಅಲ್ಲದೆ ಜನರು ನನ್ನನ್ನು ಸೀತಾಜಿ ಎಂದು ತಿಳಿದಿದ್ದಾರೆ. ರಾಮಾನಂದ ಸಾಗರ ಅವರ ರಾಮಾಯಣದಷ್ಟು ಪ್ರಸಿದ್ಧವಾದದ್ದು ಬೇರೇನೂ ಇಲ್ಲ ಎಂದು ನಾನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೇನೆ. ಹಾಗಿದ್ದಲ್ಲಿ ನಾನು ನನ್ನ ಇಮೇಜ್ನೊಂದಿಗೆ ಏಕೆ ಗೊಂದಲ ಮಾಡಿಕೊಳ್ಳಬೇಕು? ನಾನು ಸೀತಾ, ನಾನು ಅದನ್ನು ಸ್ವೀಕರಿಸಿದ್ದೇನೆ. 35 ವರ್ಷಗಳಿಂದ ನಾನು ಸೀತೆಯ ಜವಾಬ್ದಾರಿಯನ್ನು ಹೊತ್ತಿದ್ದೇನೆ. ಈಗಿರುವಾಗ ನಾನು ಬೇರೆ ಯಾವುದಾದರೂ ಪಾತ್ರದಲ್ಲಿ ಭಾಗವಾಗಲು ಏಕೆ ಪ್ರಯತ್ನಿಸಬೇಕು? ಎಂದು ಹೇಳಿದರು.
ಪರದೆಯ ಮೇಲೆ ದೇವರ ಪಾತ್ರವನ್ನು ನಿರ್ವಹಿಸುವುದರಿಂದ ನಿಜ ಜೀವನದಲ್ಲಿ ದೇವರು ಆಗುವುದಿಲ್ಲ. ಆದರೆ ಯಾರಾದರೂ ಪರದೆಯ ಮೇಲೆ ದೇವರ ಪಾತ್ರವನ್ನು ನಿರ್ವಹಿಸಿದಾಗ ಅವರ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ನನಗೆ ಒಂದು ದೊಡ್ಡ ನಿರ್ಮಾಣ ಸಂಸ್ಥೆಯಿಂದ ಕರೆ ಬಂತು. ಅವರು ನನ್ನ ಕೈಯಲ್ಲಿ ಸಿಗರೇಟನ್ನು ನೋಡಲು ಬಯಸಿದ್ದರು. ನಾನು ಅದನ್ನು ನಿರಾಕರಿಸಿದೆ. ಕೆಲವೊಮ್ಮೆ ನಾನು ಈ ರೀತಿ ಮಾಡಬೇಕೆಂದು ಈ ಜನರು ಹೇಗೆ ನಿರೀಕ್ಷಿಸುತ್ತಾರೆ ಎಂದು ಆಶ್ಚರ್ಯ ಪಡುತ್ತೇನೆ ಎಂದು ತಿಳಿಸಿದರು.
ಸದ್ಯ ರಣಬೀರ್ ಕಪೂರ್, 'ರಾಮಾಯಣ'ದ ಮೊದಲ ಭಾಗದ ಎಲ್ಲಾ ವಿಶೇಷ ದೃಶ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಸಣ್ಣಪುಟ್ಟ ಕೆಲಸಗಳು ಮಾತ್ರ ಉಳಿದಿವೆ. ರಣಬೀರ್ ರಾಮನ ಪಾತ್ರದಲ್ಲಿ ಮತ್ತು ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ, ಹನುಮನ ಪಾತ್ರದಲ್ಲಿ ಸನ್ನಿ ಡಿಯೋಲ್ ಮತ್ತು ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶನ ನಿತೇಶ್ ತಿವಾರಿ ಅವರ ಈ ಸಿನಿಮಾದ ಮೊದಲ ಭಾಗವು 2026ರ ದೀಪಾವಳಿಯಂದು ಮತ್ತು ಎರಡನೇ ಭಾಗವು 2027ರ ದೀಪಾವಳಿಯಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್)