‘ರಾಮಾಯಣ’ ಹೊಸ ಪೋಸ್ಟರ್ ರಿಲೀಸ್: ರಾಮನಾಗಿ ರಣಬೀರ್, ರಾವಣನಾಗಿ ಯಶ್ ಲುಕ್‌ಗೆ ಫ್ಯಾನ್ಸ್ ಫಿದಾ! | Ramayana posters

ಬಹುನಿರೀಕ್ಷಿತ ‘ರಾಮಾಯಣ ಪಾರ್ಟ್ ಒನ್’ ಚಿತ್ರದ ಹೊಸ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದ ಬಳಿಕ ಅನಾವರಣಗೊಂಡ ಈ ಪೋಸ್ಟರ್‌ಗಳು ಸಿನಿಪ್ರಿಯರ ಗಮನ ಸೆಳೆದಿವೆ.
'Ramayana' New Poster
‘ರಾಮಾಯಣ’ ಹೊಸ ಪೋಸ್ಟರ್‌ಗಳ ಅನಾವರಣ
Published on: 

Ramayana Part One: ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ ಒನ್’ ಸಿನಿಮಾದ ಹೊಸ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿರುವ ಈ ಪೋಸ್ಟರ್‌ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರತಂಡ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮ ನಡೆಸಿದ್ದು, ರಣಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ ಹಾಗೂ ನಮಿತ್ ಮಲ್ಹೋತ್ರಾ ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ಚಿತ್ರದ ಎರಡು ಹೊಸ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ರಾಮನಾಗಿ ರಣಬೀರ್, ಸೀತೆಯಾಗಿ ಸಾಯಿ ಪಲ್ಲವಿ

ಮೊದಲ ಪೋಸ್ಟರ್‌ನಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ. ವನವಾಸದ ಸಂದರ್ಭದಲ್ಲಿ ಮೂವರೂ ಸರಳ ಉಡುಗೆಯಲ್ಲಿ ಒಟ್ಟಿಗೆ ನಿಂತಿರುವ ದೃಶ್ಯ ಗಮನ ಸೆಳೆಯುತ್ತದೆ. ‘ಯಾವಾಗಲೂ ಒಟ್ಟಾಗಿ, ಧರ್ಮದ ಹಾದಿಯಲ್ಲಿ’ ಎಂಬ ಸಾಲಿನೊಂದಿಗೆ ಬಿಡುಗಡೆಯಾಗಿರುವ ಈ ಪೋಸ್ಟರ್, ರಾಮ-ಸೀತೆ-ಲಕ್ಷ್ಮಣರ ಬಾಂಧವ್ಯವನ್ನು ತೆರೆದಿಡುತ್ತದೆ.

ಯಶ್ ರಾವಣನಾಗಿ ಪವರ್‌ಫುಲ್ ಲುಕ್

ಇನ್ನೊಂದು ಪೋಸ್ಟರ್‌ನಲ್ಲಿ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದು, ಕಪ್ಪು-ಚಿನ್ನದ ವಸ್ತ್ರದಲ್ಲಿ ಲಂಕೆಯ ವೈಭವಯುತ ಅರಮನೆಯ ಮುಂದೆ ನಿಂತಿದ್ದಾರೆ. ‘ಮೂರು ಲೋಕಗಳ ಅಧಿಪತಿ, ರಾವಣ’ ಎಂಬ ಸಾಲಿನೊಂದಿಗೆ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ, ‘ನಮ್ಮ ಸತ್ಯ. ನಮ್ಮ ಇತಿಹಾಸ.’ ಎಂಬ ಬರಹವನ್ನೂ ನೀಡಿದೆ.

ಪೋಸ್ಟರ್‌ಗಳು ಬಿಡುಗಡೆಯಾದ ಬೆನ್ನಲ್ಲೇ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಮ ಮತ್ತು ರಾವಣನ ವಿಭಿನ್ನ ಲುಕ್‌ಗಳು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.

ದೀಪಾವಳಿಗೆ ‘ರಾಮಾಯಣ: ಪಾರ್ಟ್ ಒನ್’

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದಲ್ಲಿ ಸನ್ನಿ ಡಿಯೋಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಅರುಣ್ ಗೋವಿಲ್, ಕುನಾಲ್ ಕಪೂರ್ ಹಾಗೂ ಅದಿನಾಥ್ ಕೊಠಾರೆ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

ಇದನ್ನೂ ಓದಿ: ಡಿಜೆ ಸೌಂಡ್‌ಗೆ ಕುಸಿಯಿತೇ ಸ್ಲ್ಯಾಬ್? ಒಬ್ಬ ಸಾವು, ಹಲವರಿಗೆ ಗಾಯ; ಗಣೇಶ ವಿಸರ್ಜನೆ ವೇಳೆ ದುರಂತ! | Odisha Ganesh Immersion

ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ‘ರಾಮಾಯಣ: ಪಾರ್ಟ್ ಒನ್’ 2026ರ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಎರಡನೇ ಭಾಗ 2027ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net