ಅಪಘಾತ ವ್ಯಕ್ತಿ ಸಾವು- ಹೈವೆ ಸಿಬ್ಬಂದಿ ಮೇಲೆ ಹಲ್ಲೆ

Published on

ಮಾಗಡಿ. ಕೂಲಿ ಕಾರ್ಮಿಕನಿಗೆ ಕಾರು ಡಿಕ್ಕಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ತಾಲೂಕಿನ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ನಿವಾಸಿ ವೆಂಕಟರಾಮ (32)ಮೃತಪಟ್ಟ ದುರ್ದೈವಿ.


ಭಾನುವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ನಡೆದು ಕೊಂಡು ಹೋಗುತ್ತಿದ್ದ ವೇಳೆ ಕಾರೊಂದು ಏಕಾಏಕಿ ಡಿಕ್ಕಿ ಸಂಬವಿಸಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ . ಅಪಘಾತ ನಡೆದ ನಂತರ ವ್ಯಕ್ತಿಯನ್ನು ಕಾರು ಸುಮಾರು ದೂರ ಎಳೆದೋಯ್ದಿದೆ . ಕಾರು ಚಾಲಕನ ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣ ಎಂದು ಮೃತ ವೆಂಕಟರಾಮ ಪತ್ನಿ ವೆಂಕಟಲಕ್ಷ್ಮಮ್ಮ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಅಪಘಾತ ಸಂಭವಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು- ಮಂಗಳೂರು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಈ ವೇಳೆ ಮಾಹಿತಿ ತಿಳಿದು ಎನ್‌ಡಿಪಿಎಲ್ ರೂಟ್‌ನ ಪೆಟ್ರೋಲಿಂಗ್ ಅಧಿಕಾರಿಗಳಾದ ರಾಜಣ್ಣ ವಾಹನ ಚಾಲಕ ಮಂಜುನಾಥ್, ಸಹಾಯಕ ಪುಟ್ಟಸ್ವಾಮಿ ಸ್ಥಳಕ್ಕೆ ಬೇಟಿ ನೀಡಿ ಸಾರ್ವಜನಿಕರನ್ನು ಸಮಾಧಾನಪಡಿಸುವ ವೇಳೆ ಉದ್ರಿಕ್ತಗೊಂಡ ಸುಮಾರು 20 ಕ್ಕೂ ಹೆಚ್ಚು ಮಂದಿ ಎನ್‌ಡಿಪಿಎಲ್ ರೂಟ್‌ನ ಪೆಟ್ರೋಲಿಂಗ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ, ವಾಹನದಲ್ಲಿದ್ದ ಹಲವಾರು ವಸ್ತುಗಳನ್ನು ನಾಶಪಡಿಸಿದ್ದಾರೆ.


ಹಲ್ಲೆಗೊಳಗಾದ ಪೆಟ್ರೊಲಿಂಗ್ ವಾಹನದ ಸಿಬ್ಬಂದಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಹಲ್ಲೆ ನಡೆಸಿರುವರ ವಿರುದ್ದ ಶಿಸ್ತು ಕ್ರಮಕೈಗೊಳ್ಳುವಂತೆ ಎನ್‌ಡಿಪಿಎಲ್ ವ್ಯವಸ್ಥಾಪಕ ಜಯರಾಮೇಗೌಡ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ತಿಪ್ಪಸಂದ್ರ ಹ್ಯಾಂಡ್‌ಪೋಸ್ಟ್ನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಿಲ್ಲ, ಅವೈಜ್ಞಾನಿಕ ರಸ್ತೆ ನಿರ್ಮಿಸಿದ್ದು, ಸರ್ವಿಸ್ ರಸ್ತೆಯೂ ಸಹ ನಿರ್ಮಿಸದೆ ಇರುವುದರಿಂದ ನಿರಂತರವಾಗಿ ಅಪಘಾತ ನಡೆದು ಪ್ರಾಣಹಾನಿ ಸಂಭವಿಸುತ್ತಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net