ರಾಮನಗರ ಜಿಲ್ಲೆ ಹೆಸರು ಪ್ರಸ್ತಾಪ ತಿರಸ್ಕರಿಸಲು ಮುಖ್ಯಮಂತ್ರಿಗೆ ಸಂಸದ ಡಾ.ಮಂಜುನಾಥ್ ಪತ್ರ

DR Manjunath
Published on

ಬೆಂಗಳೂರು:
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಬಾರದು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಪತ್ರ ಬರೆದಿದ್ದಾರೆ.
ರಾಮನಗರಕ್ಕೆ ಭಾವನಾತ್ಮಕ, ಧಾರ್ಮಿಕ, ಐತಿಹಾಸಿಕ ಹಾಗೂ ಪೌರಾಣಿಕ ಇತಿಹಾಸವಿದೆ. ಕ್ಷೋಸ್ ಪೇಟೆಗೆ ರಾಮನಗರ ಎಂದು ನಾಮಕರಣ ಮಾಡಿದವರು ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರು. ನಡೆದಾಡುವ ದೇವರ ಸಿದ್ದಗಂಗಾ ಶ್ರೀಗಳು ಮತ್ತು ಆದಿಚುಂಚನಗಿರಿಯ ಬಾಲಗಂಗಾದರನಾಥ ಸ್ವಾಮೀಜಿ ಅವರು ಜನಿಸಿದ್ದು ಇದೇ ಜಿಲ್ಲೆಯಲ್ಲಿ. ಬೆಂಗಳೂರು ನಿರ್ಮಾಮೃತ ಕೆಂಪೇಗೌಡರು ಈ ಜಿಲ್ಲೆಗೆ ಸೇರಿದವರು ಎಂದು ಜಿಲ್ಲೆಯ ಸುಧೀರ್ಘ ಇತಿಹಾಸವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಭಿವೃದ್ಧಿ ದೃಷ್ಟಿಯಿಂದ 2007ರಿಂದ ರಾಮನಗರ ಜಿಲ್ಲೆಯಾಗಿದೆ. ಈ ಜಿಲ್ಲೆಗೆ ತನ್ನದೇ ಆದ ಹಲವು ಮಹತ್ವತೆ ಇದೆ. ಅದನ್ನು ಕಡೆಗಣಿಸಿ, ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಲು ಹೊರಟಿರುವುದು ಸರಿಯಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು ಎಂದು ಡಾ.ಮಂಜುನಾಥ್ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net