

ರಾಣೆಬೆನ್ನೂರು: ಇಲ್ಲಿನ ಮಾಗೋಡ ರಸ್ತೆಯ ಸ್ವಾಮಿ ವಿವೇಕಾನಂದ ನಗರದ ಶ್ರೀ ರಾಮಕೃಷ್ಣ- ವಿವೇಕಾನಂದ ಆಶ್ರಮದ ವಾಷಿರ್ಕೋತ್ಸವ ನಿಮಿತ್ತ ಯುವ ಸಮ್ಮೇಳನ, ಪ್ರವಚನ ಹಾಗೂ ಉಪನ್ಯಾಸ ಕಾರ್ಯಕ್ರಮ ಮಾ. 8 ಮತ್ತು 9ರಂದು ಇಲ್ಲಿಯ ವಿನಾಯಕ ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.
8ರಂದು ಬೆಳಗ್ಗೆ 9.30ಕ್ಕೆ ಯುವ ಸಮ್ಮೇಳನ ನಡೆಯಲಿದ್ದು, ಗದಗ- ವಿಜಯಪುರದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಪ್ರವಚನ ನೀಡಲಿದ್ದಾರೆ. ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವತಿರ್ ಸೂಲಿಬೆಲೆ 'ಯುವಜನರ ಇಂದಿನ ಸವಾಲುಗಳಿಗೆ ವಿವೇಕ ಗುರುವಿನ ಪರಿಹಾರ' ಕುರಿತು ಉಪನ್ಯಾಸ ನೀಡಲಿದ್ದು, ನಂತರ ಭಜನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಪ್ರಸಾದ ವಿತರಣೆ ನಡೆಯುತ್ತದೆ. ಸಂಜೆ 6.30 ರಿಂದ 9 ರವರೆಗೆ ವಿವೇಕ ಚಿಂತನ ಕಾರ್ಯಕ್ರಮ ನಡೆಯಲಿದೆ.
ಮಾ. 9ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ದಾವಣಗೆರೆ ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ತ್ಯಾಗಿಶ್ವರಾನಂದಜಿ ಮಹಾರಾಜ್ ಹಿತವಚನ ಹೇಳುವರು. ನಂತರ ಭಜನೆ ನಡೆಯಲಿದೆ. ಶಾಸಕ ಪ್ರಕಾಶ ಕೋಳಿವಾಡ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಕಳ ಸೋದರಿ ಅಕ್ಷಯಾ ಗೋಖಲೆ ಉಪನ್ಯಾಸ ನೀಡುವರು. ಮಧ್ಯಾಹ್ನ 1.30ಕ್ಕೆ ಪ್ರಸಾದ ನಡೆಯಲಿದೆ. ಸಂಜೆ 6.30 ರಿಂದ 9.30ರವರೆಗೆ ವಿವೇಕ ಚಿಂತನ ನಡೆಯುತ್ತದೆ. ನಂತರ ಪ್ರವಚನ ನಡೆಯಲಿದೆ.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಸ್ಥಳಿಯ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.