

ಜೈಪುರ: ತಮ್ಮನ್ನು ಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಹುದ್ದೆಯಿಂದ ಉಚ್ಚಾಟನೆ ಮಾಡಿದ ನಂತರ ಒಂದೇ ಸಾಲಿನ ಟ್ವೀಟ್ ಮೂಲಕ ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ ಎಂದಿದ್ದ ಸಚಿನ್ ಪೈಲಟ್ ಇದೀಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ.
ಪಕ್ಷದ ನಂತರ ಅಸಮಾಧಾನಗೊಂಡು ಹೊರಹೋದ ಬಳಿಕ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಇವತ್ತು ನನಗೆ ಬೆಂಬಲ ನೀಡಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ರಾಮ್ ರಾಮ್ ಸಾ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಇಲ್ಲಿ ರಾಮ್ ರಾಮ್ ಸಾ ಎಂಬುದು ರಾಜಸ್ಥಾನಿಯರು ಬಳಸುವ ಗೌರವ ಸೂಚಕ ಪದ.
ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಈಗಾಗಲೇ ಬೇರೆ ನೇಮಕವಾಗಿದೆ. ಇನ್ನು ಡಿಸಿಎಂ ಹುದ್ದೆ ಬಾಕಿ ಉಳಿದಿದ್ದು, ಅದಕ್ಕೂ ಕೂಡ ಜು.16ರೊಳಗೆ ಬೇರೆ ನೇಮಕವಾಗಲಿದೆ.(ಏಜೆನ್ಸೀಸ್)