

ಬೆಂಗಳೂರು: ಬಸವ ಕಲ್ಯಾಣದಲ್ಲಿ ನಿರ್ವಿುಸಲು ಉದ್ದೇಶಿಸಿರುವ ಅತ್ಯಾಧುನಿಕ ಅನುಭವ ಮಂಟಪಕ್ಕೆ ಅಯೋಧ್ಯೆಯ ರಾಮಮಂದಿರ ಯೋಜನೆಯ ಸ್ಪರ್ಶ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದಾರೆ.
ಬಿಎಸ್ವೈ ಅಧ್ಯಕ್ಷತೆಯಲ್ಲಿ ಬುಧವಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಚರ್ಚೆ ನಡೆಯಿತು. ಇದೇ ವೇಳೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಮಂಡಿಸಿದ ಅಭಿವೃದ್ಧಿ ನೀಲಿನಕ್ಷೆಗೂ ಸಿಎಂ ಅಸ್ತು ಎಂದರು. ಅನುಭವ ಮಂಟಪ ನಿರ್ವಣಕ್ಕೆ ಸದ್ಯ 50 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದರು.