

ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ತಮ್ಮ ಅದ್ಭುತವಾದ ನಟನೆಯ ಮೂಲಕವಾಗಿ ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸೆಲೆಬ್ರಿಟಿಗಳೂ ಆಕೆಯ ಅಭಿಮಾನಿಗಳು. ಸೆನ್ಸೇಷನಲ್ ಡೈರೆಕ್ಟರ್ ಆರ್ ಜಿವಿ (ರಾಮ್ ಗೋಪಾಲ್ ವರ್ಮಾ) ಕೂಡ ಶ್ರೀದೇವಿಯ ಕಟ್ಟಾ ಅಭಿಮಾನಿಯಾಗಿದ್ದಾರೆ. ಆರ್ ಜಿವಿ ಶ್ರೀದೇವಿ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಶ್ರೀದೇವಿಯನ್ನು ತಾನು ಪ್ರೀತಿಸುತ್ತೇನೆ ಮತ್ತು ಆಕೆಯನ್ನು ಎಷ್ಟು ಆರಾಧಿಸುತ್ತಿದ್ದೆ ಎಂದೂ ಈ ಹಿಂದೆ ಆರ್ಜಿವಿ ಹಲವು ಬಾರಿ ಹೇಳಿದ್ದಾರೆ. ಆರ್‌ಜಿವಿ ಕೂಡ ಶ್ರೀದೇವಿ ಜತೆ ಎರಡು ಸಿನಿಮಾ ಮಾಡಿದ್ದಾರೆ. ಈ ಇಬ್ಬರಲ್ಲೂ ಉತ್ತಮ ಸ್ನೇಹವಿತ್ತು.
ಸಾಂದರ್ಭಿಕವಾಗಿ ಅವರು ತಮ್ಮ ಸಂದರ್ಶನಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೀದೇವಿಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಇತ್ತೀಚೆಗಷ್ಟೇ ಆರ್‌ಜಿವಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮೂಲಕ ಕ್ರಿಯೇಟ್ ಮಾಡಿದ ಶ್ರೀದೇವಿ ಅವರ ಫೋಟೋವನ್ನು ಶೇರ್ ಮಾಡಿದ್ದಾರೆ.. ಆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶ್ರೀದೇವಿ ನನ್ನನ್ನು ಅಳುವಂತೆ ಮಾಡಿತ್ತು. ಈ ಫೋಟೋದಲ್ಲಿ ಶ್ರೀದೇವಿ ತುಂಬಾ ಸುಂದರವಾಗಿದ್ದಾರೆ ಮತ್ತು ಶ್ರೀದೇವಿಯನ್ನು ಗುರುತಿಸಿ ಕಣ್ಣೀರಿಟ್ಟಿದ್ದಾರೆ ಎಂಬರ್ಥದಲ್ಲಿ ಆರ್ಜಿವಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಆರ್‌ಜಿವಿ ಪೋಸ್ಟ್ ವೈರಲ್ ಆಗಿದೆ.
ಕೆಲ ನೆಟಿಜನ್‌ಗಳು ಆರ್‌ಜಿವಿ ಪೋಸ್ಟ್‌ಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. RGV ಕೂಡ ಅಳುತ್ತಾರಾ? RGV ಗೆ ಭಾವನೆಗಳಿವೆಯೇ? ಶ್ರೀದೇವಿ ನೆನಪಿದೆಯಾ? ಕುಡಿದು ಪೋಸ್ಟ್ ಮಾಡಿದ್ದೀಯಾ.. ಎಂದು ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.