ಪತ್ನಿಯ ಕಾಲು ಹಿಡಿದ ಸ್ಟಾರ್‌ ನಟ; ಕಾರಣ ತಿಳಿಯಲು ವಿಡಿಯೋ ನೋಡಿ..

ram charan
Published on

ಹೈದ್ರಾಬಾದ್‌: ಟಾಲಿವುಡ್‌ ನಟ ರಾಮ್ ಚರಣ್ - ಉಪಾಸನಾ ಗಂಡ-ಹೆಂಡತಿ ನಡುವಿನ ಸಂಬಂಧ ಎಷ್ಟು ಮುದ್ದಾಗಿದೆ ಎಂಬುದನ್ನು ಈಗಾಗಲೇ ಹಲವು ಬಾರಿ ತೋರಿಸಿದ್ದಾರೆ. ಇತ್ತೀಚೆಗಷ್ಟೇ ಚರಣ್ ಮತ್ತು ಉಪಾಸನಾ ಅವರ ಕ್ಯೂಟ್‌ ವಿಡಿಯೋ ವೈರಲ್ ಆಗಿದೆ.

 ನಿನ್ನೆ ಗುಜರಾತ್ ನಲ್ಲಿ ನಡೆದ ಅನಂತ್ ಅಂಬಾನಿ - ರಾಧಿಕಾ ವಿವಾಹ ಪೂರ್ವ ಸಂಭ್ರಮಾಚರಣೆಗೂ ಚರಣ್ ಹೋಗಿದ್ದರು. ಚರಣ್ ಮತ್ತು ಉಪಾಸನಾ ಖಾಸಗಿ ಜೆಟ್‌ನಲ್ಲಿ ಹೋಗಿದ್ದರು.

 ನಿನ್ನೆ ಚರಣ್ ಉಪಾಸನಾ ಫ್ಲೈಟ್ ನಲ್ಲಿ ಹೋಗುತ್ತಿದ್ದಾಗ ಉಪಾಸನಾ ಕಾಲು ನೋಯುತ್ತಿತ್ತು, ಉಪಾಸನಾ ರಾಮ್ ಚರಣ್ ಮೇಲೆ ಕಾಲು ಹಾಕಿದಾಗ ಚರಣ್ ಉಪಾಸನಾ ಅವರ ಪಾದಗಳನ್ನು ಒತ್ತಿ ಮಸಾಜ್ ಮಾಡಿ ಉಪಾಸನಾ ರಿಲ್ಯಾಕ್ಸ್ ಮಾಡಿದ್ದಾರೆ. ಈ ಮುದ್ದಾದ ವಿಡಿಯೋವನ್ನು ಉಪಾಸನಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

ಈ ವಿಡಿಯೋವನ್ನು ಅಭಿಮಾನಿಗಳು ಶೇರ್ ಮಾಡಿದ್ದು, ಎಷ್ಟೇ ಸ್ಟಾರ್ ಹೀರೋ ತನ್ನ ಹೆಂಡತಿಗೆ ಗುಲಾಮನೆ ಎಂದು ಫನ್ನಿ ಕಮೆಂಟ್ಸ್ ಮಾಡುತ್ತಿದ್ದಾರೆ. ಈ ಮುದ್ದಾದ ಜೋಡಿಯ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net