ನೀವು ನನಗೆ ಸ್ಪೆಷಲ್‌... Darshan ಬರ್ತ್​ಡೇಗೆ ರಕ್ಷಿತಾ ಪ್ರೇಮ್​ ಸ್ಪೆಷಲ್ ವಿಶ್​

Darshan Rakshitha
Published on

ಬೆಂಗಳೂರು: ಬಾಕ್ಸ್​ಆಫೀಸ್​ ಸುಲ್ತಾನ, ಅಭಿಮಾನಿಗಳ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿರುವ ನಟ, ಚಾಲೆಂಜಿಂಗ್​ ಸ್ಟಾರ್ ದರ್ಶನ್ (Darshan) ಅವರು ಇಂದು 48ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ನಟಿ ರಕ್ಷಿತಾ ಕೂಡ ದರ್ಶನ್​ ಅವರ ಬರ್ತ್​ಡೇಗೆ ವಿಶ್​​​ ಮಾಡಿದ್ದು, ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇವತ್ತು ವಿಶೇಷ ದಿನ‌, ಯಾಕ್ ಗೊತ್ತಾ? ಇವತ್ತು ನನ್ನ ಬೆಸ್ಟ್ ಫ್ರೆಂಡ್ ಬರ್ತ್‌ಡೇ. ಇವರು ಯಾವಾಗಲೂ ಕಷ್ಟ-ಸುಖದಲ್ಲಿ ಒಂದೇ ರೀತಿಯಲ್ಲಿ ಜೊತೆಗಿದ್ದವರು. ಇವರು ಜೊತೆಗಿರುವ ಜೀವನ‌ ಯಾವಾಗಲೂ ಉತ್ತಮವಾಗಿರುತ್ತದೆ. ನೀವು ನನಗೆ ಸ್ಪೆಷಲ್‌. ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಶುಭ ಹಾರೈಸುತ್ತೇನೆ. ಯಾವಾಗಲೂ ಸ್ಪೆಷಲ್ ಆಗೇ ಇರ್ತೀಯ, ಲವ್ ಯೂ ಲಾಟ್ಸ್​ ಎಂದು ಶುಭಹಾರೈಸಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿ ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ (Darshan) ಅವರು ರೆಸ್ಟ್​ನಲ್ಲಿದ್ದು, ಕೆಲವು ದಿನಗಳ ನಂತರ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಬಾರಿ ಜನುಮದಿನವನ್ನು ಆಚರಿಸಿಕೊಳ್ಳದಿರಲು ನಟ ದರ್ಶನ್ ನಿರ್ಧರಿಸಿದ್ದು, ಕೆಲ ದಿನಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು.

ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ. ಪ್ರತಿ ವರ್ಷ ಆಚರಣೆ ಮಾಡಿಕೊಳ್ಳುತ್ತಿದ್ದೇನು. ನೀವು ಬಂದಾಗ ನಿಂತುಕೊಂಡು ನಿಮ್ಮ ಪ್ರೀತಿಯಲ್ಲಿ ಭಾಗಿಯಾಗುತ್ತಿದ್ದೇನು. ನನಗೆ ಅನಾರೋಗ್ಯ ಇರುವುದರಿಂದ ತುಂಬಾ ಹೊತ್ತು ನಿಲ್ಲಲು ಸಾಧ್ಯವಿಲ್ಲ. ನಿಂತು ಕೊಂಡು ಎಲ್ಲರಿಗೂ ವಿಶ್​ ಮಾಡಲು ನನ್ನ ಇಂದ ಸಾಧ್ಯವಾಗಲ್ಲ. ಇದು ನಿಮಗೂ ಗೊತ್ತಿರುವ ವಿಚಾರವಾಗಿದೆ.

ಇಂಜಕ್ಷನ್​ ತಗೊಂಡಾಗ ಕೆಲವು ದಿನ ಆರೋಗ್ಯವಾಗಿ ಇರುತ್ತೇನೆ.. ಪವರ್​ ಕಡಿಮೆ ಆದರೆ ಮತ್ತೆ ನೋವು ಶುರುವಾಗುತ್ತದೆ. ಆಪರೇಷನ್​ ಮಾಡಲೇಬೇಕು ಅದು ಗೊತ್ತಿರುವ ವಿಚಾರವಾಗಿದೆ. ದಯಮಾಡಿ ನನ್ನ ಸೆಲೆಬ್ರೆಟಿಗಳು ಇದೊಂದು ಬಾರಿ ನನ್ನ ಕ್ಷಮಿಸಿ.. ನಾನು ನಿಮಗೆ ಸಿಗಲೇ ಬೇಕು ಸಿಗುತ್ತೇನೆ ಸ್ವಲ್ಪ ಆರೋಗ್ಯ ಸರಿ ಹೋಗುವವರೆಗೂ ಸಮಯ ಕೊಡಿ ಎಂದು ಅಭಿಮಾನಿಗಳ ಬಳಿ ನಟ ದರ್ಶನ್​ (Darshan) ಮನವಿ ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net