'ರಕ್ಷಕ್‌ ಹೆಂಗೆ ಬೆಳೆದ ಅಂತಾರೆ ಇದೇ ಕಾರಣ ನೋಡಿ’ ಅಜ್ಜಿ-ತಂದೆಯ ಸಮಾಧಿ ತೊಳೆದ ರಕ್ಷಕ್ ಬುಲೆಟ್ ಹೇಳಿದ್ದಿಷ್ಟು...

rakshakbullet
Published on

ಬೆಂಗಳೂರು: ನಟ ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಂದೆ ಬುಲೆಟ್ ಪ್ರಕಾಶ್ ಹಾಗೂ ಅಜ್ಜಿ ಗೌರಮ್ಮ ಅವರ ಸಮಾಧಿಯನ್ನು ತೊಳೆದಿದ್ದಾರೆ.

ವಿಡಿಯೊದಲ್ಲಿ ರಕ್ಷಕ್‌ ಮಾತನಾಡಿದ್ದು, ನನಗೆ ಎಷ್ಟೇ ಖುಷಿ , ಬೇಜಾರು ಆದರೂ ಇಲ್ಲಿ ಬಂದು 5 ನಿಮಿಷ ಕೂತು ನನ್ನ ಮನಸಲ್ಲಿ ಇರೋದು ಹೇಳ್ಕೊಂಡಾಗ ತುಂಬ ಖುಷಿ, ನೆಮ್ಮದಿ ಕೂಡ ಆಗತ್ತೆ. ನಾವು ಕ್ಲೀನ್ ಆಗಿದ್ದಂತೆ, ಇವರು ಕ್ಲೀನ್ ಆಗಿರಬೇಕು. ಹೀಗಾಗಿ, ವಾರಕ್ಕೆ ಒಮ್ಮೆ ಬಂದು ಇಲ್ಲಿ ಸಮಾಧಿ ತೊಳೆದು ಹೋಗುತ್ತೇನೆ ಎಂದಿದ್ದಾರೆ.

ಎಲ್ಲರೂ ಕೇಳುತ್ತಾರೆ 3 ವರ್ಷದಲ್ಲಿ ರಕ್ಷಕ್‌ ಹೆಂಗೆ ಬೆಳೆದುಬಿಟ್ಟ ಅಂತ. ಈ ಮೂರು ವರ್ಷದ ಹಿಂದೆ ಶ್ರಮ ಇದೆ. ನಮ್ಮ ಅಜ್ಜಿ, ತಂದೆನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದೇನೆ. ಮಗು ರೀತಿ ನೋಡಿಕೊಂಡಿದ್ದೇನೆ. ಊದಿನಕಡ್ಡಿ ಹಚ್ಚಿ, ಅವರಿಷ್ಟದ ತಿಂಡಿನ ಇಟ್ಟು ಹೋಗುತ್ತೇನೆ. ನಮಸ್ಕಾರ ಮಾಡಿ ಹೋಗುತ್ತೇನೆ. ದೊಡ್ಡವರ ಆಶೀರ್ವಾದ ಇದ್ದರೆ ಬೆಳೆಯುತ್ತೀರಾ. ದೊಡ್ಡವರ ಆಶೀರ್ವಾದವೇ ಇದಕ್ಕೆ ಕಾರಣ’ ಎಂದಿದ್ದಾರೆ.

ಈ ವಿಡಿಯೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ದೇವರು ನಿನಗೆ ಒಳ್ಳೆಯದು ಮಾಡಲಿ. ಆಶಿರ್ವಾದ ನಿನಗೆ ಸಾದ ಇರುತ್ತದೆ ಎಂದು ನೆಟ್ಟಿಗರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net