'ನಾನು ಬ್ರೂಸ್ ಲೀ ತಂಗಿ ಚೂಸ್ಲಿ' ಎಂದ ರಾಖಿ ಸಾವಂತ್; ​​ರಾಜ್​ ಕುಂದ್ರಾ ರೀತಿ ಮಾಸ್ಕ್​​​ ಧರಿಸಿದ್ದು ಯಾಕೆ..?

rakhimix
Published on

Rakhi Sawanth Video Viral: ಬಾಲಿವುಡ್ ಬ್ಯೂಟಿ ನಟಿ ರಾಖಿ ಸಾವಂತ್​ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಪ್ರತಿ ದಿನವೂ ಒಂದಿಲ್ಲೊಂದು ಕಾರಣದಿಂದ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ಪತಿ ಆದಿಲ್​ ಖಾನ್​ ದುರಾನಿ ಜೊತೆ ವಿವಾದ ಆದ ನಂತರ ಮಾಧ್ಯಮದ ಗಮನವೂ ಅವರ ಕಡೆಗಿದೆ.


ಪ್ರಚಾರಕ್ಕಾಗಿ ನಾನಾ ವೇಷಗಳನ್ನು ಹಾಕುತ್ತಲೇ ಇರುತ್ತಾರೆ ರಾಖಿ ಸಾವಂತ್. ಈವರೆಗೂ ನಾನಾ ರೀತಿಯ ಕಾಸ್ಟ್ಯೂಮ್ ಹಾಕಿಕೊಂಡು ಬಂದಿದ್ದಾರೆ. ಈ ಹಿಂದೆ ರಾಖಿ ಸೈನಿಕನ ವೇಷದಲ್ಲಿ ಕಾಣಿಸಿಕೊಂಡಿದ್ದು ಆ ವಿಡಿಯೋ ಸಖತ್​​ ವೈರಲ್​ ಆಗಿತ್ತು. ಸಾಕಷ್ಟು ಜನರು ಈ ವೇಷ ಮತ್ತು ಅವಳ ಡ್ರಾಮಾಗೆ ನೆಗೆಟಿವ್ ಕಾಮೆಂಟ್ ಗಳನ್ನೇ ಹಾಕಿದ್ದರು.


ಇದೀಗ ರಾಖಿ ಅಶ್ಲೀಲ ಚಿತ್ರೀಕರಣದಲ್ಲಿ ಬಂಧಿಯಾಗಿದ್ದ ರಾಜ್​ ಕುಂದ್ರಾ ರೀತಿ ಮಾಸ್ಕ್ ತೊಟ್ಟು ಕ್ಯಾಮರಾಗೆ ಪೋಸ್​​​ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಮಾಸ್ಕ್​ ಜತೆಗೆ ಕುಕ್ಕರ್​​ ಕ್ಯಾಪ್​ ಹಿಡಿದ ರಾಖಿ, ನಾನು ಬ್ರೂಸ್ ಲೀ ತಂಗಿ ಚೂಸ್ಲಿ ಎಂದ ರಾಖಿ ಸಾವಂತ್ ಎಂದೂ ಹೇಳಿದ್ದಾರೆ.


ರಾಖಿ ಅವರ ಈ ವಿಡಿಯೋಗೆ ನೆಟ್ಟಿಗರು ನಾನಾ ಕಾಮೆಂಟ್​​ಗಳನ್ನ ಮಾಡುತ್ತಿದ್ದಾರೆ. ಇನ್ನು ರಾಖಿಗೆ ಈ ಮಾಸ್ಕನ್ನ ರಾಜ್​​ ಕುಂದ್ರಾ ಗಿಫ್ಟ್​​ ಮಾಡಿದ್ದಾರೆ ಎಂದು ವಿಡಿಯೋ ಮೇಲೆ ಬರೆಯಲಾಗಿದೆ. ಒಟ್ಟಾರೆ ರಾಖಿ ಹೊಸ ಅವತಾರ ನೋಡಿ ಇದೊಂದು ಕಡಿಮೆ ಇತ್ತು ಅಂತಾ ಜನ ಕಾಮೆಂಟ್​​​ ಮಾಡುತ್ತಿದ್ದಾರೆ.


ರಾಖಿ ಸಾವಂತ್ ಸಿನಿಮಾ ಮಾಡಿ ಸುದ್ದಿಯಾಗಿದ್ದಕ್ಕಿಂತ ಕಾಂಟ್ರವರ್ಸಿಯಿಂದ ಹೆಚ್ಚೆಚ್ಚು ಸೌಂಡ್ ಮಾಡಿರೋದು ಜಾಸ್ತಿ. ಅದರಲ್ಲೂ ಪತಿ ಆದಿಲ್ ಖಾನ್ ಜೊತೆಗಿನ ಕಿತ್ತಾಟ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.

ಇದೀಗ ತಮ್ಮ ಬಯೋಪಿಕ್ ಬಗ್ಗೆ ಆಸೆಯನ್ನ ನಟಿ ವ್ಯಕ್ತಪಡಿಸಿದ್ದರು. ತನ್ನ ಜೀವನ ಚರಿತ್ರೆಯನ್ನ ಕಾಂತಾರ ನಟ ಕಮ್ ಡೈರೆಕ್ಟರ್ ರಿಷಬ್ ಶೆಟ್ಟಿ ನಿರ್ದೇಶನ ಮಾಡಬೇಕು ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net