ದುರ್ಗಿಗುಡಿ ಕನ್ನಡ ಸಂಘದಿಂದ ರಾಜ್ಯೋತ್ಸವ

kannada
Published on

ಶಿವಮೊಗ್ಗ: ದುರ್ಗಿಗುಡಿ ಕನ್ನಡ ಸಂಘದಿಂದ ಸೋಮವಾರ ಕನ್ನಡ ರಾಜ್ಯೋತ್ಸವ ಆಚರಿಸಿ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಭುವನೇಶ್ವರಿ ದೇವಿಯ ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು. ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಆರಂಭವಾದ ಮೆರವಣಿಗೆ ಗಾಂಧಿಬಜಾರ್ ಮೂಲಕ ನೆಹರು ರಸ್ತೆ ಮಾರ್ಗವಾಗಿ ದುರ್ಗಿಗುಡಿ ತಲುಪಿತು.

ಮೆರವಣಿಗೆಯಲ್ಲಿ ಸಂಘದ ಪದಾಧಿಕಾರಿಗಳಾದ ಸ.ನ.ಮೂರ್ತಿ, ನರಸಿಂಹ ಗಂಧದಮನೆ, ಎಸ್.ಕೆ.ಪ್ರಕಾಶ್, ಎ.ಭರತೇಶ್, ವಿ.ರವೀಂದ್ರ, ಆರ್.ಗುರುರಾಜ್, ಧನಂಜಯ, ಜಿ.ಚಂದ್ರಶೇಖರ್, ಸತೀಶ್ ನಾಯಕ್, ಎಸ್.ಸಿ.ಹರೀಶ್, ಆರ್.ಕಿರಣ್, ಪುಟ್ಟರಾಜ್, ಬಿ.ಆರ್.ರಾಕೇಶ್, ಯೋಗೀಶ್, ಮೋಹನ್, ಮಧುಸೂದನ್, ಪ್ರಸನ್ನಕುಮಾರ್, ಶಿವಪ್ರಕಾಶ್, ರಾಕೇಶ್, ನರಸಿಂಹ, ಮಂಜುನಾಥ್ ಮುಂತಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net