

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಕನ್ನಡ ರಾಜ್ಯೋತ್ಸವಕ್ಕೆ ಅಡ್ಡಿಪಡಿಸಿದವರ ವಿರುದ್ಧ ಅಗತ್ಯ ಕ್ರಮಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ಸಲ್ಲಿಕೆಯಾಗಿದೆ.
ರಾಜ್ಯೋತ್ಸವ ಆಚರಣೆ ಮಾಡದಂತೆ ಕೇರಳ ಮೂಲದ ಸಿಬ್ಬಂದಿ ಅಡ್ಡಿಪಡಿಸಿದ್ದು, ಇದು ನಾಡಿಗೆ ಮಾಡಿದ ಅಪಮಾನ. ಈ ಅಡ್ಡಿ ಪ್ರಯತ್ನದ ಹಿಂದೆ ಹಲವು ಕಾಣದ ಕೈ ಕೆಲಸ ಮಾಡಿವೆ. ಪ್ರಾಧಿಕಾರ ಕೂಡಲೇ ಮಧ್ಯ ಪ್ರವೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು, ಕಠಿಣ ಕ್ರಮಕ್ಕೆ ಶಿಾರಸು ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಮರಿಲಿಂಗ ಗೌಡ ಮಾಲಿಪಾಟೀಲ್ ಮನವಿ ಮಾಡಿದ್ದಾರೆ.