ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

Lakshmipathi kolara
ಲಕ್ಷ್ಮೀಪತಿ ಕೋಲಾರ
Published on

ಕೋಲಾರ: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರವು ಪ್ರಕಟಿಸಿದ್ದು, ಜಿಲ್ಲೆಯ ಮೂರು ಮಂದಿ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಾಹಿತ್ಯ ಕ್ಷೇತ್ರದಿಂದ ಲಕ್ಷ್ಮೀಪತಿ ಕೋಲಾರ, ಕ್ರೀಡಾ ಕ್ಷೇತ್ರದಿಂದ ಟಿ.ಎಸ್.ದಿವ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಿಂದ ಕೆ.ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.
ಸಾಹಿತ್ಯ ಕ್ಷೇತ್ರ:
ಕೋಲಾರ ತಾಲೂಕಿನ ಶಾಪೂರು ಗ್ರಾಮದಲ್ಲಿ ಜನಿಸಿದ ಲಕ್ಷ್ಮೀಪತಿ ಕೋಲಾರ ಕವಿ, ನಾಟಕಕಾರ, ವಿಮರ್ಶಕ, ಸಂಸ್ಕ್ಪ್ರತಿ ಸಂಶೋಧಕ, ಚಲನಚಿತ್ರ ಸಾಹಿತಿ, ಹವ್ಯಾಸಿ ಪತ್ರಕರ್ತರಾಗಿ ದಶಕಗಳ ಕಾಲ ದಲಿತ ಚಳವಳಿ ಮತ್ತು ಅಹಿಂದ ಕಾರ್ಯಕರ್ತರಾಗಿ ದುಡಿದ ಅನುಭವ ಹೊಂದಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ದಲಿತ ಚಳವಳಿಯಲ್ಲಿ ತೊಡಗಿಸಿಕೊಂಡಿರುವ  ಲಕ್ಷ್ಮೀಪತಿ ಕೋಲಾರ ಹಲವು ದಶಕಗಳ ಕಾಲ ಸಾವಾಜಿಕ ನ್ಯಾಯಕ್ಕಾಗಿ ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನೇ ಸೀಮಿತಗೊಳಿಸಿದ್ದರು.
ಕ್ರೀಡಾ ಕ್ಷೇತ್ರ:
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಮೂಲದವರಾದ ಸುಬ್ಬರಾಜು ಮತ್ತು ಗಾಯತ್ರಿ ದಂಪತಿಗಳ ಪುತ್ರಿ ಟಿ.ಎಸ್.ದಿವ್ಯಾ, ಏಷ್ಯನ್ ಗೇಮ್ಸ್‌ನ ಶೂಟಿಂಗ್ ಸ್ಪರ್ಧೆಯಲ್ಲಿ ಪಡೆದ ಬೆಳ್ಳಿ ಪದಕದ ಸಾಧನೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಚೀನಾದೇಶದ ಹಾಂಗ್‌ಚೌದಲ್ಲಿ ನಡೆದ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದಿಂದ ಪ್ರತಿನಿಸಿದ್ದ  ದಿವ್ಯಾ ಶೂಟಿಂಗ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದು ದೇಶದ ಕೀರ್ತಿ ಬೆಳಗಿದ್ದರು.
ಮನರಂಜನೆಗಾಗಿ ನಿರಂತರವಾಗಿ ಶೂಟಿಂಗ್ ಅಭ್ಯಾಸ ವಾಡುತ್ತಿದ್ದ ಅವರು, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿದ ನಂತರ  2019 ರಲ್ಲಿ ಬೆಂಗಳೂರಿನ ಭಾರತೀಯ ಕ್ರೀಡಾ ಅಕಾಡೆಮಿಯಲ್ಲಿ ಮಂಜುನಾಥ್ ಪಟಗಾರ್ ಅವರ ಬಳಿ ಶೂಟಿಂಗ್ ಅಭ್ಯಾಸ ನಡೆಸಿದರು.
ನಿರಂತರ ಪರಿಶ್ರಮ, ಶ್ರದ್ದೆಯಿಂದಾಗಿ ಕೇವಲ ಮೂರೇ ವರ್ಷದಲ್ಲಿ ದಿವ್ಯಾ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡು ಇದೀಗ ಬೆಳ್ಳಿ ಪದಕ ಪಡೆಯುವ ಮೂಲಕ ಮುಂದಿನ ಒಲಂಪಿಕ್ಸ್ ನಲ್ಲಿಯೂ ಸಾಧನೆ ವಾಡುವ ಆಶಯ ಹೊಂದಿದ್ದಾರೆ.
ಅವರ ಈ ಸಾಧನೆ ಕೋಲಾರ ಜಿಲ್ಲೆಯ ಇತರೆ ಕ್ರೀಡಾಪಟುಗಳಿಗೂ ಪ್ರೇರಣೆಯಾಗಿ ಮತ್ತಷ್ಟು ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಜಿಲ್ಲೆಯ ನತೆ ಹೆಚ್ಚಿಸಿದ್ದಾರೆ.

ಟಿ.ಎಸ್.ದಿವ್ಯಾ
ಶೈಕ್ಷಣಿಕ ಕ್ಷೇತ್ರ:
ತಾಲೂಕಿನ ಕ್ಯಾಲನೂರು ಗ್ರಾಮದ ಕೆ.ಚಂದ್ರಶೇಖರ್ ನಗರದ ನಚಿಕೇತ ನಿಲಯದಲ್ಲಿ ವ್ಯಾಸಂಗ ವಾಡಿ ಬಿಎ ಪದವಿ ಪಡೆದು, ದಲಿತ ಕ್ರಿಯಾ ಸಮಿತಿಯ ಮೂಲಕ ದಲಿತ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.
ತಳವರ್ಗದಿಂದ ಬಂದ ಅವರು ಶಿಕ್ಷಣದ ಮಹತ್ವ ಅರಿತು ಕೊಂಡು ಬೆಂಗಳೂರಿನ ಜೈಭೀಮ್‌ನಗರದಲ್ಲಿ ಬುದ್ಧ ಹಿರಿಯ ಪ್ರಾಥಮಿಕ ಪಾಠಶಾಲೆ ಆರಂಭಿಸಿ, ಜ್ಞಾನದೇಗುಲ ಪ್ರೌಢಶಾಲೆ ಆರಂಭಿಸಿ, ದೊಡ್ಡಬಿಡದಿ ಬಳಿ ಬುದ್ಧ ವಸತಿ ಶಾಲೆ, ಸಿಂಗಾಪುರ ಬಡಾವಣೆಯಲ್ಲಿ ನವೋದಯ ಕಿಶೋರ ಶಾಲೆ ಮತ್ತು ಭಗವಾನ್ ಬುದ್ಧ ಹೋಮಿಯೋಪತಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ವಾಡಿದ್ದಾರೆ.
 ಸುವರ್ಣ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಮೂವರು ಸಾಧಕರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಜಿಲ್ಲೆಗೆ ದೊರೆತ ಕೀರ್ತಿ ಹಾಗೂ ಜಿಲ್ಲೆಯ ಹೆಮ್ಮೆಯಾಗಿದೆ.

ಕೆ.ಚಂದ್ರಶೇಖರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net