ರಾಜ್ಯಸಭೆ ಚುನಾವಣೆ‌ 2024: ಆತ್ಮಸಾಕ್ಷಿ ಮತ ಅನ್ನೋದು ಇದ್ಯಾ ಎಂದ ಸಿಎಂ

Untitled design - 2024-02-27T104943.710
Published on

ಬೆಂಗಳೂರು: ಇಂದು ಬೆಳಗ್ಗೆಯಿಂದಲೇ ರಾಜ್ಯಸಭೆ ಚುನಾವಣೆ‌ಗೆ ವೋಟಿಂಗ್ ಆರಂಭಗೊಂಡಿದ್ದು, ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ‌ಮೊದಲ ಮತದಾನ ಮಾಡಿದರು. ತದನಂತರ ಬಂದ ಶಾಸಕರು ತಮ್ಮ ಗುಂಪಿನ ಜತೆಗೆ ಬಂದು ಮತ ಚಲಾಯಿಸುತ್ತಿದ್ದಾರೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ಪ್ರಕ್ರಿಯೆ ಶುರುವಾಗಿದೆ.

ಬಿಜೆಪಿಯ ಸದಸ್ಯರು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಇನ್ನು ಕಾಂಗ್ರೆಸ್​ ನಾಯಕರು ಮತಹಾಕಲು ಬಸ್​ನಲ್ಲಿ ಬಂದಿದ್ದು, ತಮ್ಮ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡಲು ಒಟ್ಟಾಗಿ ಎಂಟ್ರಿ ಕೊಟ್ಟರು. ಸದ್ಯ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​ ಶಾಸಕರು ವೋಟಿಂಗ್ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

"ನಮ್ಮ ಶಾಸಕರು ಬದ್ಧತೆ ಉಳಿಸಿಕೊಂಡಿದ್ದಾರೆ. ನಮ್ಮಲ್ಲಿರುವ ಒಟ್ಟು 19 ಶಾಸಕರಲ್ಲಿ ಒಗ್ಗಟ್ಟಿದೆ" ಎಂದು ಎಚ್​.ಡಿ. ಕುಮಾರಸ್ವಾಮಿ ಹೇಳಿದರು. ಇನ್ನು ಮತ ಚಲಾಯಿಸಲು ಬಂದ ಸಿಎಂ ಸಿದ್ದರಾಮಯ್ಯ, "ಬಿಜೆಪಿ, ಜೆಡಿಎಸ್ ಮತಗಳೇ ನಮಗೆ ಬರಲಿವೆ. ನಮ್ಮ ಮೂವರು ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ. ನಮ್ಮ ಶಾಸಕರಿಗೆ ಆಸೆ, ಆಮಿಷ ಒಡ್ಡುತ್ತಿದ್ದಾರೆ. ಹೀಗಾಗಿ ಎಫ್​ಐಆರ್ ಹಾಕಲಾಗಿದೆ. ಎಲ್ಲರೂ ಗೆಲ್ಲಬೇಕು ಅಂತಾ ಅಭ್ಯರ್ಥಿ ಹಾಕುತ್ತಾರೆ. ಆತ್ಮಸಾಕ್ಷಿ ಮತ ಅನ್ನೋದು ಇದ್ಯಾ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net