ರಾಜೀವ್ ಗಾಂಧಿ ತೂಕದ ರಾಜಕಾರಣಿ; ವಿ.ಎಸ್.ಉಗ್ರಪ್ಪ

ex mp v.s.Ugrappa
ಮಾಜಿ ಸಂಸದ ವಿ.ಎಸ್.ಉಗ್ರಪ್ಪ
Published on

ಬೆಂಗಳೂರು: ರಾಜೀವ್ ಗಾಂಧಿ ರಾಷ್ಟ್ರಕಂಡ ಅಪರೂಪದ ರಾಜಕಾರಣಿ. 1989 ರಲ್ಲಿ ಬೋಪೋರ್ಸ್ ಹಗರಣದಲ್ಲಿ 64 ಕೋಟಿ ಅಕ್ರಮವಾಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದಾಗ. ನಾನು ಇದರಲ್ಲಿ ಭಾಗಿಯಾಗಿಲ್ಲ ಆದರೆ ಜಂಟಿ ಸದನ ಸಮಿತಿಯನ್ನು ರಚಿಸುತ್ತೇನೆ ಎಂದು ಧೈರ್ಯವಾಗಿ ಹೇಳಿದ ತೂಕದ ರಾಜಕಾರಣಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು ನಾನು ಶುದ್ಧ ರಾಜಕಾರಣಿ ಎಂದು ಹೇಳುವ ಈಗಿನ ಪ್ರಧಾನಿ ಅವರು ಬಿಜೆಪಿ ಸರ್ಕಾರದಲ್ಲಿ ಹಗರಣ ನಡೆದೇ ಇಲ್ಲ ಎನ್ನುತ್ತಾರೆ. ಆದರೆ ಕಳೆದ 20 ದಿನಗಳ ಹಿಂದೆ 5 ಜಿ ಹರಾಜಿನ ಮೂಲಕ 70 ಸಾವಿರ ಕೋಟಿ ಆದಾಯ ಬರುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕೇವಲ 12 ಸಾವಿರ ಕೋಟಿಗೆ ನೀಡಲಾಗಿದೆ. ಅಂದರೆ ದೇಶಕ್ಕೆ 60 ಸಾವಿರ ಕೋಟಿ ನಷ್ಟವಾಗಿದೆ ಎಂದು ಟೀಕಿಸಿದರು.

ದೇವರಾಜ ಅರಸು ಅವರು ಹಾವನೂರು ವರದಿಯನ್ನು ಅನೇಕರ ವಿರೋಧ ಕಟ್ಟಿಕೊಂಡು ಸಾಮಾಜಿಕ ನ್ಯಾಯಕ್ಕೆ ಮುನ್ನುಡಿ ಬರೆದರು. ಜನಪರವಾದ ಆಡಳಿತ ನೀಡಿದ, ಹೊಸ ಮನ್ವಂತರವನ್ನು ರಾಜ್ಯದ ಆಡಳಿತಕ್ಕೆ ನೀಡಿದವರು ನಮ್ಮ ದೇವರಾಜ ಅರಸು ಅವರು. ಅವರ ಹಾದಿಯಲ್ಲಿ ನಡೆಯೋಣ. ರಾಜ್ಯ ಹಾಗೂ ದೇಶವನ್ನು ಕಟ್ಟೋಣ ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net