'ಪಾಲಿಟಿಕ್ಸ್​ಗೆ ಎಂಟ್ರಿಯಾಗದೇ ಎಕ್ಸಿಟ್ ಆಗೋ ಸಾಮರ್ಥ್ಯ ಇರೋದು ರಜಿನಿಕಾಂತ್​ಗೆ ಮಾತ್ರ!'

Abhishek manu singhvi and his tweet
Published on

ಬೆಂಗಳೂರು: ರಾಜಕೀಯ ರಂಗ ಪ್ರವೇಶದಿಂದ ಹಿಂದೆ ಸರಿದ ಸೂಪರ್​ಸ್ಟಾರ್ ರಜಿನಿಕಾಂತ್​ ಅವರ ನಿರ್ಧಾರ ಸದ್ಯ ಟ್ರೋಲ್ ಆಗಿದೆ. ರಜಿನಿಕಾಂತ್ ಜೋಕ್ಸ್​ ಬಹಳ ಜನಪ್ರಿಯವಾಗಿದ್ದರೂ, ಈ ಬಾರಿ ಟ್ರೋಲ್ ಮಾಡಿರುವುದು ಕಾಂಗ್ರೆಸ್​ ನಾಯಕ ಅಭಿಷೇಕ್ ಮನು ಸಿಂಘ್ವಿ.

ಈ ನಡುವೆ, ತಮಿಳುನಾಡು ಬಿಜೆಪಿ ಉಸ್ತುವಾರಿಯಾಗಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಪ್ರತಿಕ್ರಿಯಿಸಿದ್ದು, ರಜಿನಿಕಾಂತ್​ ಗ್ರೇಟ್ ಲೀಡರ್​. ನಾವು ಅವರನ್ನು ಗೌರವಿಸುತ್ತೇವೆ. ಅವರ ಸಾಮರ್ಥ್ಯ ಅವರಿಗೆ ಗೊತ್ತು. ರಾಷ್ಟ್ರೀಯ ಹಿತಾಸಕ್ತಿ ಮತ್ತು ತಮಿಳುನಾಡಿನ ಹಿತಾಸಕ್ತಿ ಕಾಪಾಡಲು ಯಾವಾಗಲೂ ಅವರು ಮುಂದೆ ಇರುತ್ತಾರೆ ಎಂದು ಹೇಳಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಅಭಿಷೇಕ್ ಮನು ಸಿಂಘ್ವಿ 'ಪಾಲಿಟಿಕ್ಸ್​ಗೆ ಎಂಟ್ರಿಯಾಗದೇ ಎಕ್ಸಿಟ್ ಆಗೋ ಸಾಮರ್ಥ್ಯ ಇರೋದು ರಜಿನಿಕಾಂತ್​ಗೆ ಮಾತ್ರ!' ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ. ಈ ಟ್ವೀಟ್​ಗೆ ಗಂಭೀರ ಪ್ರತಿಕ್ರಿಯೆಗಳ ಜತೆಗೆ ಲಘು, ಜೋಕ್ಸ್ ರೂಪದ ಪ್ರತಿಕ್ರಿಯೆಗಳೂ ವ್ಯಕ್ತವಾಗಿದೆ. ಇದಲ್ಲದೆ, #RajinikanthPoliticalEntry ಇಟ್ಟು ಸರ್ಚ್ ಕೊಟ್ಟರೆ ಕಂಡುಬರುವ ಆಯ್ದ ಟ್ರೋಲ್​ ಟ್ವೀಟ್​ಗಳು ಇಲ್ಲಿವೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net