'ಜೈಲರ್​' ಸಕ್ಸಸ್​ ಬೆನ್ನಲ್ಲೇ ಬದರೀನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ತಲೈವಾ

Untitled design - 2023-08-13T200940.938
Published on

ಉತ್ತರಾಖಂಡ: ಸೂಪರ್​ಸ್ಟಾರ್​ ರಜನಿಕಾಂತ್​ ನಟನೆಯ 'ಜೈಲರ್'​ ಚಿತ್ರ ಬಿಡುಗಡೆಗೊಂಡು ಇದೀಗ ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಮಾಡುತ್ತಿದ್ದು, ದೇಶ-ವಿದೇಶಗಳಲ್ಲಿ ಹೊಸ ರೆಕಾರ್ಡ್​ ಅನ್ನು ನಿರ್ಮಿಸಿದೆ. ಜಾಗತಿಕವಾಗಿ ಚಿತ್ರ ಯಶಸ್ವಿಯಾಗಿದೆ. ಈ ಬೆನ್ನಲ್ಲೇ ತಲೈವಾ ತಮ್ಮ ಆಧ್ಯಾತ್ಮಿಕ ಒಲವಿನತ್ತ ಪ್ರಯಾಣ ಬೆಳೆಸಿದ್ದಾರೆ.

ಆಗಸ್ಟ್​ 10 ರಂದು ಜೈಲರ್ ​ಚಿತ್ರ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ಆದ್ರೆ, ಚಿತ್ರ ರಿಲೀಸ್​ ಆಗುವ ಹಿಂದಿನ ದಿನವೇ ರಜನಿಕಾಂತ್ ತಮ್ಮ ಸ್ನೇಹಿತರೊಡನೆ ಹಿಮಾಲಯಕ್ಕೆ ತೆರಳಿದ್ದರು. ಹಿಮಾಲಯ ಸೇರಿದಂತೆ ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ನಟ, ಇಂದು ಬದರೀನಾಥ ದೇಗುಲಕ್ಕೆ ತೆರಳಿ, ದೇವರ ದರ್ಶನ ಪಡೆದುಕೊಂಡಿದ್ದಾರೆ.

ಒಂದೆಡೆ ಚಿತ್ರತಂಡ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದರೇ, ಈ ಖುಷಿ ಸಂಗತಿಯನ್ನು ಆಚರಿಸಲು ತಲೈವಾ ತಂಡದ ಜತೆಯಿಲ್ಲ ಎಂಬ ಬೇಸರ ಮತ್ತೊಂದೆಡೆ. ಚಿತ್ರಮಂದಿರಗಳಲ್ಲಿ ರಜನಿಕಾಂತ್​ ಅವರ ನಟನೆಯನ್ನು ನೋಡಿ ಫಿದಾ ಆಗಿರುವ ಪ್ರೇಕ್ಷಕರು, ಚಿತ್ರದ ಗೆಲುವನ್ನು ತಮ್ಮ ಗೆಲುವಿನಂತೆ ಸಂಭ್ರಮಿಸುತ್ತಿದ್ದಾರೆ.

ಸಿನಿಮಾದಲ್ಲಿ ಸೂಪರ್​ಸ್ಟಾರ್​ ಜತೆಗೆ ತೆರೆ ಹಂಚಿಕೊಂಡ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಅವರ ವಿಶೇಷ ಪಾತ್ರ ಅಭಿಮಾನಿಗಳ ಗಮನವನ್ನು ಸೆಳೆದಿದ್ದು, ಶಿವಣ್ಣನ ರೋಲ್​ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net