

ಉತ್ತರಪ್ರದೇಶ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ಬಾಕ್ಸ್ ಆಫೀಸ್ ಸಖತ್ ಸೌಂಡ್ ಮಾಡುತ್ತಿದೆ. ಸಿನಿಮಾ ರಿಲೀಸ್ ಗೂ ಮುನ್ನ ರಜನಿಕಾಂತ್ ಹಿಮಾಲಯಕ್ಕೆ ಹೋಗಿದ್ದು ಗೊತ್ತೇ ಇದೆ. ಈ ಅನುಕ್ರಮದಲ್ಲಿ ರಜನಿ ಉತ್ತರಪ್ರದೇಶದಲ್ಲೂ ಪ್ರವಾಸ ಮಾಡುತ್ತಿದ್ದಾರೆ. ಈ ವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಅಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಜಿನಿ ಅವರು ಶನಿವಾರ ಲಕ್ನೋದ ಅವರ ನಿವಾಸದಲ್ಲಿ ಸಿಎಂ ಯೋಗಿ ಅವರನ್ನು ಭೇಟಿ ಮಾಡಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅವರ ಕಾಲಿಗೆ ನಮಸ್ಕರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ರಜನಿ ಅಭಿಮಾನಿಗಳು ರಜನಿ ವರ್ತನೆಯನ್ನು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಸೂಪರ್ ಸ್ಟಾರ್ ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ರಜನಿಕಾಂತ್ ಯಾಕೆ ಹೀಗೆ ಮಾಡಿದರು ಎಂಬುದೇ ದೊಡ್ಡ ಚರ್ಚೆಯಾಗಿದೆ. ರಜನಿ ತನಗಿಂತ ತುಂಬಾ ಚಿಕ್ಕವನಾದರೂ ಯೋಗಿಯ ಕಾಲಿಗೆ ನಮಸ್ಕರಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸುತ್ತಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ.
ಸಿಎಂ ಯೋಗಿ ಅವರು ಸನ್ಯಾಸಿ ಎಂಬ ಕಾರಣಕ್ಕೆ ಮಾಡಿದ್ದಾರೆ ಎಂದು ಬೆಂಬಲಿಸುತ್ತಿದ್ದಾರೆ. ರಜನಿಕಾಂತ್ ತುಂಬಾ ಆಧ್ಯಾತ್ಮಿಕರು ಎಂದು ಹೇಳಬೇಕಾಗಿಲ್ಲ. ಯೋಗಿ ಈ ಹಿಂದೆ ಗೋರಖ್‌ಪುರದ ಮುಖ್ಯಸ್ಥರಾಗಿದ್ದರು. ಆ ಭಕ್ತಿ ಭಾವದಿಂದ ರಜನೀಕಾಂತ್ ಯೋಗಿಯ ಪಾದಕ್ಕೆ ನಮಸ್ಕರಿಸಿದರು ಎಂದು ನಂಬಲಾಗಿದೆ. ಏನೇ ಆಗಲಿ ಯೋಗಿಯ ಪಾದಕ್ಕೆ ನಮಸ್ಕರಿಸಿದ್ದು ಕೆಲವರಿಗೆ ಸುತಾರಾಂ ಇಷ್ಟವಾಗಲಿಲ್ಲ.
ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾ ಬಾಕ್ಸ್ ಆಫೀಸ್ ಸಖತ್ ಸೌಂಡ್ ಮಾಡುತ್ತಿದೆ. ಇದುವರೆಗೆ ರೂ.500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮತ್ತೊಂದೆಡೆ ತಲೈವಾಗೆ ಈ ದೊಡ್ಡ ಯಶಸ್ಸು ಸಿಕ್ಕಿದೆ.