

ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಭಾಗವಹಿಸಿದ್ದು, ಮಾಸ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಅದ್ದೂರಿ ಮದುವೆಗೆ ಟಾಲಿವುಡ್, ಬಾಲಿವುಡ್, ಕಾಲಿವುಡ್ ಹೀಗೆ ಎಲ್ಲ ರಂಗಗಳ ಫೇಮಸ್ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸೂಪರ್ಸ್ಟಾರ್ ರಜನಿಕಾಂತ್ ಸಹ ಭಾಗವಹಿಸಿದ್ದು, ಸಮಾರಂಭದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಅವರು ವರನ ಜತೆ ಸ್ಟೆಪ್ಸ್ ಹಾಕಿ ಗಮನ ಸೆಳೆದರು.
ವೈರಲ್ ಆಗಿರುವ ವೀಡಿಯೋದಲ್ಲಿ, ಮದುವೆ ಸಮಾರಂಭದಲ್ಲಿ ಜಾನ್ ಸೀನಾ, ಸಲ್ಮಾನ್ ಖಾನ್, ಶಾರುಖ್ ಖಾನ್ ಮುಂತಾದ ತಾರೆಯರು ತಮ್ಮ ಮಾಸ್ ಸ್ಟೆಪ್ಸ್ ಮೂಲಕ ವರನನ್ನು ಸ್ವಾಗತಿಸುತ್ತಿದ್ದಾರೆ. ಅಷ್ಟರಲ್ಲಿ ರಜನಿಕಾಂತ್ ಅಲ್ಲಿಗೆ ಪ್ರವೇಶಿಸಿ ಸ್ಟೆಪ್ಸ್ ಹಾಕಿ ಅಲ್ಲಿದ್ದವರನ್ನು ಬೆಚ್ಚಿ ಬೀಳಿಸಿದರು. ಈ ವಯಸ್ಸಿನಲ್ಲೂ ಸೂಪರ್ಸ್ಟಾರ್ ರಜನಿಕಾಂತ್ ತಮ್ಮ ಹೆಜ್ಜೆಗಳ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
ರಜನಿಕಾಂತ್ ಅವರು ಪತ್ನಿ ಲತಾ, ಮಗಳು ಐಶ್ವರ್ಯ ಮತ್ತು ಮೊಮ್ಮಗನೊಂದಿಗೆ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಜನಿಕಾಂತ್ ಸ್ಟೆಪ್ಸ್ಗೆ ಅಲ್ಲಿದ್ದವರೂ ಚಪ್ಪಾಳೆ, ಶಿಳ್ಳೆಗಳ ಮೂಲಕ ಹುರಿದುಂಬಿಸಿದರು. ರಜನಿಕಾಂತ್ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗಳನ್ನು ನೋಡಿ ಸೂಪರ್ ಸ್ಟಾರ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ತಮ್ಮ ತಲೈವಾಗೆ ಇನ್ನೂ ವಯಸ್ಸಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.