ರಜನಿ ಕೂಲಿ Vs ಹೃತಿಕ್ ವಾರ್​-2: ಫಸ್ಟ್​ ಡೇ ಕಲೆಕ್ಷನ್​ ಎಷ್ಟು? ಧೂಳೆಬ್ಬಿಸಿದ ಸಿನಿಮಾ ಯಾವುದು ಗೊತ್ತೆ!

photo (15)
Published on

ರಜನಿ ಕೂಲಿ Vs ಹೃತಿಕ್ ವಾರ್​-2: ಸೌತ್​ ಸೂಪರ್​ ಸ್ಟಾರ್​ ರಜನಿಕಾಂತ್ ನಾಯಕರಾಗಿರುವ ಲೋಕೇಶ್​ ಕನಗರಾಜ್​ ನಿರ್ದೇಶನ 'ಕೂಲಿ' ಚಿತ್ರ ಇಂದು ಪ್ರಪಂಚದ್ಯಾಂತ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಬರಿ ರಜನಿ ಮಾತ್ರವಲ್ಲ, ಜೊತೆಗೆ ಸೌತ್​ನ ಸ್ಟಾರ್​ಗಳಾದ ನಾಗರ್ಜುನ್​​ , ಉಪ್ರೇಂದ್ರ, ಬಾಲಿವುಡ್​ನ ಅಮೀರ್​ಖಾನ್​​ ಮತ್ತು ಮಲಿಯಾಳಂನ ಶೌಬಿನ್​​ ಸಾಹಿರ್​ ಸೇರಿದಂತೆ ವಿವಿಧ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಹೀಗಾಗಿ, ಸಿನಿಮಾ ಸೌತ್​ ಮತ್ತು ನಾರ್ಥ್​ನಲ್ಲಿ ಅಲ್ಲದೆ, ವಿಶ್ವದ್ಯಾಂತ ಹೈಪ್​ ಹುಟ್ಟುಹಾಕಿದೆ. ಇದೀಗ ಸಿನಿಮಾ ಬೆಸ್ಟ್ ಆಗಿದೆ ಎಂದು ಸಿನಿರಸಿಕರ ಅಭಿಪ್ರಾಯವಾಗಿದೆ.

ಇದರ ನಡುವೆ ಬಾಲಿವುಡ್​ ಸ್ಟಾರ್​ ಹೃತಿಕ್​ ರೋಷನ್​​ ಮತ್ತು ಸೌತ್​ನ ಜೂನಿಯರ್​ ಎನ್​ಟಿಆರ್ ನಟನೆಯ ವಾರ್-2 ಚಿತ್ರ ಕೂಡ ಇಂದೇ ಬಿಡುಗಡೆಗೊಂಡಿದೆ. ವಾರ್​-2 ಕೂಡ ಪ್ರೇಕ್ಷರಿಂದ ಒಳ್ಳೆಯ ರೆಸ್ಪಾನ್ಸ್​ ಪಡೆದಿದೆ. ಇದೀಗ ಈ ಎರಡು ಸಿನಿಮಾಗಳು ಒಂದೇ ದಿನ ಚಿತ್ರಮಂದಿರಕ್ಕೆ ಕಾಲಿಟ್ಟಿದ್ದು, ಯಾವ ಸಿನಿಮಾ ಬಾಕ್ಸ್​ ಆಫಿಸ್​ನಲ್ಲಿ ಧೂಳೆಬ್ಬಿಸಿವೆ ಎಂಬುದು ತಿಳಿಯೋಣ.

ಮೇಲುಗೈ ಸಾಧಿಸಿದ ಕೂಲಿ

ಟ್ರೇಡ್ ವೆಬ್‌ಸೈಟ್ ಪ್ರಕಾರ, ಸಂಜೆ 6 ಗಂಟೆಯ ಹೊತ್ತಿಗೆ 'ಕೂಲಿ' ಭಾರತದಲ್ಲಿ 46.52 ಕೋಟಿ ರೂ. ನಿವ್ವಳ ಗಳಿಸಿದೆ. ಆದರೆ, ಅದೇ ಸಮಯದಲ್ಲಿ ವಾರ್-2 ಸಿನಿಮಾ 31.37 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.

ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾದ ಈ ಚಿತ್ರವು ದಕ್ಷಿಣ ಭಾರತೀಯ ಭಾಷೆಗಳಲ್ಲಿ ಅದ್ಭುತ ಗಳಿಕೆಯನ್ನು ತೋರಿಸಿದೆ. ಸಂಜೆ ಹೊತ್ತಿಗೆ ಕೂಲಿ, ತಮಿಳು 84.5%, ತೆಲುಗು 92% ಮತ್ತು ಹಿಂದಿ 28% ರಷ್ಟು ಗಳಿಕೆಯನ್ನು ದಾಖಲಿಸಿದೆ.

ಪಾಂಡಿಚೇರಿ, ಸೇಲಂ ಮತ್ತು ವಾರಂಗಲ್‌ನಂತಹ ಪ್ರದೇಶಗಳು 99% ರಷ್ಟು ಗಳಿಕೆಯನ್ನು ದಾಖಲಿಸಿದರೆ, ಚೆನ್ನೈ, ಕೊಯಮತ್ತೂರು ಮತ್ತು ಹೈದರಾಬಾದ್‌ನಂತಹ ಪ್ರದೇಶಗಳು 97% ರಷ್ಟು ಗಳಿಕೆಯನ್ನು ದಾಖಲಿಸಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net