ರಜಿನಿಕಾಂತ್ ಜತೆ ಮೋಹನ್​ಲಾಲ್; 169ನೇ ಚಿತ್ರ ಜೈಲರ್

Mohan Lal
Published on

ರಜಿನಿಕಾಂತ್ ನಾಯಕನಾಗಿರುವ 169ನೇ ಚಿತ್ರ ‘ಜೈಲರ್’. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ ಈ ಆಕ್ಷನ್ ಚಿತ್ರದಲ್ಲಿ ದಕ್ಷಿಣ ಭಾರತದ ಅತಿ ದೊಡ್ಡ ಸ್ಟಾರ್​ಗಳು ತೆರೆ ಹಂಚಿಕೊಳ್ಳಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಶಿವರಾಜಕುಮಾರ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅದೇ ಸಮಯದಲ್ಲಿ ಮಲಯಾಳಂ ಸೂಪರ್​ಸ್ಟಾರ್ ಮೋಹನ್ ಲಾಲ್ ‘ಜೈಲರ್’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು.

ಇದೀಗ ನಿರ್ವಪಕರು ‘ಜೈಲರ್’ ಚಿತ್ರದಲ್ಲಿ ಮೋಹನ್ ಲಾಲ್ ಲುಕ್ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಚೆನ್ನೈನಲ್ಲಿ ಮೋಹನ್ ಲಾಲ್ ಭಾಗದ ಚಿತ್ರೀಕರಣ ಮಾಡಲಾಗಿದೆಯಂತೆ. ಹೀಗೆ ದಕ್ಷಿಣ ಭಾರತದ ದೊಡ್ಡ ಸ್ಟಾರ್​ಗಳು ಒಂದಾಗಿರುವುದು ‘ಜೈಲರ್’ ಬಗ್ಗೆ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಕುತೂಹಲ, ನಿರೀಕ್ಷೆಗಳನ್ನು ಮೂಡಿಸಿದೆ.

ರಜಿನಿಕಾಂತ್, ಶಿವರಾಜಕುಮಾರ್, ಮೋಹನ್ ಲಾಲ್ ಜತೆಗೆ ಚಿತ್ರದಲ್ಲಿ ರಮ್ಯಕೃಷ್ಣ, ಯೋಗಿ ಬಾಬು, ವಿನಾಯಕನ್, ವಸಂತ್ ರವಿ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನವಿದ್ದು, ಇದೇ ಏ. 14ರಂದು ಸಿನಿಮಾ ಬಿಡುಗಡೆಯಾಗಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net