ರಜಿನಿ-ಮಂಜು ಸಖತ್ ಸ್ಟೆಪ್: ‘ವೆಟ್ಟೈಯನ್’ ಚಿತ್ರದ ಮೊದಲ ಹಾಡು ರಿಲೀಸ್

rajini
Published on

ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ಟಿ.ಜೆ.ಜ್ಞಾನವೇಲ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ವೆಟ್ಟೈಯನ್’. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸಿನಿಮಾ ಇದೇ ಅ. 10ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಮಧ್ಯೆ, ಚಿತ್ರದ ಮೊದಲ ‘ಮನಸಿಲಾಯೋ’ ಎಂಬ ಹಾಡನ್ನು ಕನ್ನಡ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ‘ಅಣ್ಣ ಬಂದವ್ನೇ, ಆಳಲಿಕೆ ಬಂದವ್ನೇ, ಮುಗಿಸಲಿಕೆ ಬಂದವ್ನೇ. ಸ್ಕೆಚ್ಚೇ ಹಾಕವ್ನೇ’ ಎಂದು ಆರಂಭವಾಗುವ ಕನ್ನಡ ಅವತರಣಿಕೆಯ ಗೀತೆಯನ್ನು ವರದರಾಜ ಚಿಕ್ಕಬಳ್ಳಾಪುರ ರಚಿಸಿದ್ದು, ನಕಾಶ್ ಅಜೀಜ್, ಅರುಣ್ ಕೌಂಡಿನ್ಯ, ದೀಪ್ತಿ ಸುರೇಶ್ ಧ್ವನಿಯಾಗಿದ್ದಾರೆ. ಕಲರ್‌ುಲ್ ಸೆಟ್‌ನಲ್ಲಿ, ನೂರಾರು ಡಾನ್ಸರ್‌ಗಳ ಜತೆ ರಜಿನಿಕಾಂತ್ ಮತ್ತು ಮಂಜು ವಾರಿಯರ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಗೀತೆಗೆ ಅನಿರುದ್ಧ ರವಿಚಂದರ್ ಸಂಗೀತ, ದಿನೇಶ್ ನೃತ್ಯ ನಿರ್ದೇಶನವಿದೆ. ಈ ಚಿತ್ರದ ಮೂಲಕ ಅಮಿತಾಭ್ ಬಚ್ಚನ್ ಹಾಗೂ ರಜಿನಿಕಾಂತ್ ಮೂರು ದಶಕದ ಬಳಿಕ ಮತ್ತೆ ಒಂದಾಗಿದ್ದಾರೆ. ರಾನಾ ದಗ್ಗುಬಾಟಿ, ಫಹದ್ ಫಾಸಿಲ್, ರಿತಿಕಾ ಸಿಂಗ್, ವಿಜಯನ್, ಜಿ.ಎಂ.ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್ ತಾರಾಗಣದಲ್ಲಿದ್ದಾರೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net