ಕೃತಕ ಬುದ್ಧಿಮತ್ತೆ ವ್ಯವಹಾರ ಉತ್ತಮಕ್ಕೆ ಸಹಾಯ; ಜ್ಯೋತಿ

15-RNR-06
Published on

ರಾಣೆಬೆನ್ನೂರ: ಕೃತಕ ಬುದ್ಧಿಮತ್ತೆಯು ವ್ಯವಹಾರ ಕಾರ್ಯಗಳನ್ನು ಉತ್ತಮವಾಗಿಸಲು ನೆರವಾಗಲಿದೆ ಎಂದು ದಾವಣಗೆರೆ ಬಾಪೂಜಿ ಹೈಟೆಕ್​ ಎಜುಕೇಷನ್​ ಬಿಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಜ್ಯೋತಿ ನೀಲಯ್ಯ ಹೇಳಿದರು.

ನಗರದ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್​ ವಿಭಾಗದ ವತಿಯಿಂದ ಆಟಿರ್ಫಿಷಿಯಲ್​ ಇಂಟಲಿಜೆನ್ಸ್​ ಮತ್ತು ಬಿಸಿನೆಷ್​ ಅಟೋಮೇಷನ್​ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಗ್ರಾಹಕ ಸೇವೆ, ಡೇಟಾ ವಿಶ್ಲೇಷಣೆ ಮತ್ತು ಪ್ರಕಿಯೆಯ ಅಪ್ಟಿಮೈಸೇಶನ್​ಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಎಐ (ಕೃತಕ ಬುದ್ಧಿಮತ್ತೆ) ಬಳಕೆ ಸಾಮಾನ್ಯವಾಗಲಿದೆ ಎಂದರು.

ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು.

ಪ್ರೊ. ರೇಖಾ ಶಿಡೇನೂರ, ಪ್ರೊ. ನಾಗರಾಜ ಗವಿಯಪ್ಪನವರ, ಪ್ರಿಯಾ ವಿ.ಎಂ., ಅಶ್ವಿನಿ ಮೆಹರವಾಡೆ, ಸುಕೃತಿ ಎಸ್​.ಎ., ಅಫ್ರೀನ್​ ಕಿತ್ತೂರ ಹಾಗೂ ಸಿಬ್ಬಂದಿ ವರ್ಗ, ವಿದ್ಯಾಥಿರ್ನಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net