ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಕೌಶಲ ಬೆಳೆಸಿಕೊಳ್ಳಿ; ಜಿಲ್ಲಾಧಿಕಾರಿ

12-RNR-03
Published on

ರಾಣೆಬೆನ್ನೂರ: ವಿದ್ಯಾಥಿರ್ಗಳು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಉತ್ತಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಸ್ಥಳಿಯ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್​ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ಕಿಲ್​ಪ್ಲಸ್​&-4 ಲ್ಯಾಬ್​ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಯದ ಮಾರುಕಟ್ಟೆಯ ಅವಶ್ಯಕತೆಗಳನ್ನು ಅರಿತುಕೊಂಡು ಆಧುನಿಕ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳಬೇಕು. ಇನ್ನು ಸರ್ಕಾರದ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾಥಿರ್ನಿಯರ ಬದುಕಿನಲ್ಲಿ ಶಿಷ್ಟಾಚಾರ ಸಮಯಪಾಲನೆ ಕೌಶಲಗಳ ಮಹತ್ವ ಅವಶ್ಯವಾಗಿದೆ ಎಂದರು.

ಸಂಸ್ಥೆಯ ಸ್ಥಳಿಯ ಆಡಳಿತ ಮಂಡಳಿ ಚೇರ್ಮನ್​ ವಿ.ಪಿ. ಲಿಂಗನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಕೌಶಲಯುಕ್ತ ಮತ್ತು ಕೌಶಲರಹಿತ ಅಭ್ಯಥಿರ್ಗಳ ನಡುವಿನ ವ್ಯತ್ಯಾಸ ಕುರಿತು ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್​ ಸಿಇಒ ಪಿ.ಎನ್​. ನಾಯಕ ಉಪನ್ಯಾಸ ನೀಡಿದರು.

ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ., ಉಪನ್ಯಾಸಕರಾದ ಶಶಿಕಿರಣ, ನೇತ್ರಾವತಿ ಕಮ್ಮಾರ, ವಿದ್ಯಾಶ್ರೀ ದಾಮೋದರ, ಪ್ರೊ ನಾಗರಾಜ ಗವಿಯಪ್ಪನವರ, ಚನ್ನಬಸಪ್ಪ ಗುದ್ಲಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net