

ರಾಣೆಬೆನ್ನೂರ: ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಬೇಕಾದರೆ ಸ್ಪರ್ಧಾತ್ಮಕ ಮನಸ್ಥಿತಿ ಬೆಳೆಸಿಕೊಂಡು ಪರಿಶ್ರಮದಿಂದ ಅಧ್ಯಯನ ಮಾಡಬೇಕು. ವಿಕಸನಗೊಳ್ಳುತ್ತಿರುವ ಬ್ಯಾಂಕಿಂಗ್ ವೃತ್ತಿಗೆ ಹೊಂದಿಕೊಳ್ಳುವ ರೀತಿಯಲ್ಲಿ ವಿನೂತನ ಅಧ್ಯಯನ ಮಾಡಬೇಕು ಎಂದು ಉಪನ್ಯಾಸಕಿ ರಜನಿ ಲಿಂಗನಗೌಡ್ರ ಹೇಳಿದರು.
ಸ್ಥಳಿಯ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ಕಾಮರ್ಸ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಥಿರ್ಗಳ ಜೀವನದಲ್ಲಿ ವೃತ್ತಿ ಅವಕಾಶಗಳು, ಸವಾಲುಗಳು, ಸಿದ್ದತೆಯ ಅಗತ್ಯತೆಯನ್ನು ಎತ್ತಿತೋರಿಸುತ್ತವೆ. ಬ್ಯಾಂಕಿಂಗ್ನ ಭವಿಷ್ಯದಲ್ಲಿ ನುರಿತ ವೃತ್ತಿಪರರ ಅಗತ್ಯತೆಯ ಬಗ್ಗೆ ಗಮನಹರಿಸುವುದನ್ನು ಒಳಗೊಂಡಿರುತ್ತದೆ. ಧೈರ್ಯ ಮತ್ತು ದೃಢನಿಶ್ಚಯದಿಂದ ಸವಾಲುಗಳನ್ನು ಎದುರಿಸಲು ವಿದ್ಯಾಥಿರ್ಗಳು ಇತರರಿಂದ ಪ್ರೇರಣೆ ಪಡೆದುಕೊಳ್ಳಬೇಕು ಎಂದರು.
ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ವೀರಣ್ಣ ಸಿ.ಕೆ., ವಿದ್ಯಾಶ್ರೀ ದಾಮೋದರ, ನಯನಾ ಕೆರೂಡಿ, ಅಶ್ವಿನಿ ಮೆಹರವಾಡೆ, ಬಸಲಿಂಗಯ್ಯ ಹಿರೇಮಠ, ಸುಜಾತ ಹುಲ್ಲೂರು, ನಾಗರಾಜ ಗವಿಯಪ್ಪನವರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.