ಜಗತ್ತಿಗೆ ಪೂರಕವಾದ ಜ್ಞಾನ ಕಲಿತುಕೊಳ್ಳಿ; ಮೇಘಾ

20-RNR-06
Published on

ರಾಣೆಬೆನ್ನೂರ: ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯ ಕ್ರಮಗಳ ಬೋಧನೆಗೆ ಸೀಮಿತವಾಗಿರದೆ ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾದ ಜ್ಞಾನವನ್ನು ವಿದ್ಯಾಥಿರ್ಗಳಿಗೆ ತುಂಬುವ ಮೂಲಕ ಅವರ ಆಲೋಚನಾ ಸಾಮಥ್ಯ ಹೆಚ್ಚಿಸುವ ಕೆಲಸ ಮಾಡಬೇಕು ಚಿತ್ರದುರ್ಗದ ಪೊಲೀಸ್​ ತರಬೇತಿ ಶಾಲೆಯ ಪಿಎಸ್​ಐ ಮೇಘಾ ಟಿ.ಎನ್​. ಹೇಳಿದರು.

ಸ್ಥಳಿಯ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಎನ್​ಎಸ್​ಎಸ್​ ಘಟಕದ ವತಿಯಿಂದ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಎನ್​ಎಸ್​ಎಸ್​ ವಾಷಿರ್ಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.

ಕಠಿಣ ಪರಿಶ್ರಮ ಸತತ ಪ್ರಯತ್ನ ಇದ್ದಲ್ಲಿ ಮಾತ್ರ ಯಶಸ್ಸು ಸಾಧ್ಯ. ಪ್ರಸ್ತುತ ಜಾಗತೀಕರಣ ಯುಗದಲ್ಲಿ ವಿದ್ಯಾಥಿರ್ಗಳ ಎದುರು ಅನೇಕ ಸವಾಲುಗಲಿವೆ. ಅವುಗಳನ್ನು ಮೆಟ್ಟಿ ಸಾಧಿಸುವುದು ಬಹು ಸವಾಲಿನ ಕೆಲಸವಾಗಿದೆ. ಅದಕ್ಕಾಗಿ ಎಲ್ಲರೂ ಶಿಸ್ತು, ಶ್ರದ್ಧೆ, ಬದ್ಧತೆಯಿಂದ ವಿದ್ಯಾಭ್ಯಾಸ ಮಾಡಬೇಕು. ವಿದ್ಯಾಥಿರ್ಗಳು ತಮ್ಮನ್ನು ತಾವು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಬಿ.ಡಿ. ಸಿದ್ದಪ್ಪಳವರ ಮಾತನಾಡಿ, ವಿದ್ಯಾಥಿರ್ ಜೀವನ ಅಮೂಲ್ಯವಾಗಿದೆ. ಪ್ರತಿಯೊಬ್ಬರೂ ಭವಿಷ್ಯದಲ್ಲಿ ಉನ್ನತ ಗುರಿ ಇಟ್ಟುಕೊಂಡು ಬದುಕನ್ನು ರೂಪಿಸಕೊಳ್ಳುವತ್ತ ಶ್ರಮಿಸಬೇಕು. ವಿದ್ಯಾಥಿರ್ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆಯ ಪಥದಲ್ಲಿ ಮುಂದುವರಿಯಬೇಕು ಎಂದರು.

ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕ ನಾಗರಾಜ ಗವಿಯಪ್ಪನವರ, ಅಶೋಕ ಸಾಹುಕಾರ, ಶಿವಾಜಪ್ಪ ನೀಲಮ್ಮನವರ, ದಿಳ್ಳೆಪ್ಪ ರಾಮಪ್ಪನವರ, ಸೋಮಲಿಂಗಪ್ಪ ಹಲವಾಗಲ, ಕೃಷ್ಣ ಎಲ್​.ಎಚ್​., ವಾಣಿ ಪಾಟೀಲ, ಮಂಜಪ್ಪ ಸಣ್ಣಬಸಪ್ಪನವರ, ಶ್ರೀಕಾಂತ ಕುಂಚೂರ, ರೇಖಾ ಸಿಡೇನೂರ, ಭೀಮಾರಥಿ ತೀರ್ಥ, ಎಸ್​.ವೈ. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net