ಸಾಧಿಸುವ ಛಲವಿದ್ದರೆ ಮಾತ್ರ ಯಶಸ್ಸು ಮುಟ್ಟಲು ಸಾಧ್ಯ; ಸುಪ್ರಿಯಾ

18-RNR-05
Published on

ರಾಣೆಬೆನ್ನೂರ: ನಮ್ಮಿಂದ ಸಮಾಜಕ್ಕೆ ಸಹಾಯ ಮಾಡುವ ಮನಸ್ಸು ನಮ್ಮದಾಗಬೇಕು. ಅಂದಾಗ ಮಾತ್ರ ನಮ್ಮ ವ್ಯಕ್ತಿತ್ವದ ಮೌಲ್ಯಗಳು ವೃದ್ಧಿಯಾಗುತ್ತವೆ. ಸ್ಥಾನಮಾನ ಪಡೆಯುವುದಕ್ಕಿಂತ ಸಾಧಿಸುವ ಛಲ ನಮಗಿರಬೇಕು. ಅಂದಾಗ ಮಾತ್ರ ನಮ್ಮ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಉಪನ್ಯಾಸಕಿ ಸುಪ್ರಿಯಾ ಆರ್​. ಹೇಳಿದರು.

ನಗರದ ಕೆಎಲ್​ಇ ರಾಜರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 2024&-25ನೇ ಸಾಲಿನ ವಾಷಿರ್ಕ ಸ್ನೇಹ ಸಮ್ಮೇಳನ ಹಾಗೂ ಬಿ.ಎ., ಬಿಕಾಂ ಅಂತಿಮ ಪದವಿ ವಿದ್ಯಾಥಿರ್ಗಳಿಗೆ ಬೀಳ್ಕೊಡಿಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಬಿ.ಎಸ್​. ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾಥಿರ್ಗಳು ಮುಂದಿನ ಜೀವನದ ದಾರಿ ಹಾಗೂ ದಾರಿಯಲ್ಲಿ ಹೇಗೆ ಸಾಗಬೇಕು ಎಂಬುದನ್ನು ಅರ್ಥ ಮಾಡಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡ್ರ ಅಧ್ಯಕ್ಷತೆ ವಹಿಸಿದ್ದರು.

ಪ್ರಾಚಾರ್ಯ ನಾರಾಯಣ ನಾಯಕ, ವಿದ್ಯಾಶ್ರೀ ದಾಮೋದರ, ಚನ್ನಬಸಪ್ಪ ಮಾಳಿ, ಮಧು ಗಾಮದ, ರೇಖಾ ಶಿಡೇನೂರ, ಸಾಯಿಲತಾ ಮಡಿವಾಳರ, ಕೃಷ್ಣ ಎಲ್​.ಎಚ್​., ವಾಣಿಶ್ರೀ ಪಾಟೀಲ, ಭಾಗ್ಯವತಿ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net