

ಹೈದರಾಬಾದ್: ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ಹೆಸರು ಮಾಡಿರುವ ಆಸ್ಟ್ರೇಲಿಯಾದ ದಂತಕಥೆ ಆಟಗಾರ ಡೇವಿಡ್ ವಾರ್ನರ್ ಈಗ ನಟನೆಗೆ ಕಾಲಿಟ್ಟಿದ್ದಾರೆ. ಡೇವಿಡ್ ವಾರ್ನರ್(David Warner) ತೆಲುಗು ಚಿತ್ರ 'ರಾಬಿನ್ ಹುಡ್' ಮೂಲಕ ನಟನೆಗೆ ಪದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಅನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಸಮಯದಲ್ಲಿ ಡೇವಿಡ್ ವಾರ್ನರ್ ಕೂರ ಉಪಸ್ಥಿತರಿದ್ದರು.
ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರು ರಾಬಿನ್‌ಹುಡ್ ಕಾರ್ಯಕ್ರಮದಲ್ಲಿ ವಾರ್ನರ್ ಬಗ್ಗೆ ಅನುಚಿತ ಕಾಮೆಂಟ್‌ಗಳನ್ನು ಮಾಡಿದರು. ಮಾಜಿ ಕ್ರಿಕೆಟಿಗರನ್ನು ಉದ್ದೇಶಿಸಿ ಮಾಡಿದ ಅಪಮಾನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೆಟ್ಟಿಗರು ರಾಜೇಂದ್ರ ಪ್ರಸಾದ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೇಳಿಕೆ ವಿವಾದವಾಗಿ ಮಾರ್ಪಡುತ್ತಿದೆ ಎಂದು ಅರಿತ ನಟ ರಾಜೇಂದ್ರ ಪ್ರಸಾದ್ ಡೇವಿಡ್ ವಾರ್ನರ್ಗೆ ಕ್ಷಮೆಯಾಚಿಸಿದ್ದಾರೆ. ನಾನು ಉದ್ದೇಶಪೂರ್ವಕವಾಗಿ ಆ ಹೇಳಿಕೆಗಳನ್ನು ನೀಡಿಲ್ಲ ಮತ್ತು ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಬಿನ್ ಹುಡ್ ನಲ್ಲಿ ನಿತಿನ್ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಾಜೇಂದ್ರ ಪ್ರಸಾದ್, ದೇವದತ್ ನಾಗೆ ಮತ್ತು ಶೈನ್ ಟಾಮ್ ಚಾಕೊ ಕೂಡ ಚಿತ್ರದ ಭಾಗವಾಗಿದ್ದಾರೆ. ಇದರಲ್ಲಿ ಡೇವಿಡ್ ವಾರ್ನರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶಿಸಿದ್ದಾರೆ ಮತ್ತು ಅವರೇ ಕಥೆಯನ್ನೂ ಬರೆದಿದ್ದಾರೆ. ಈ ಚಿತ್ರ ಮಾರ್ಚ್ 28ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್)