

ಲಂಡನ್: ಯುವ, ಕ್ರಿಯಾಶೀಲ ಹಾಗೂ ಪರಿಶ್ರಮಿ ಭಾರತೀಯ ದಾದಿ (ಇಂಡಿಯನ್ ನರ್ಸ್), ಕೌನ್ಸಿಲರ್ ರಾಜೀವ್ ಮೇತ್ರಿ ವೆಲ್ಶ್ ಲೇಬರ್ ಬಿಎಎಂಇ (ಬೇಮ್ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ. ಕಾರ್ಯದರ್ಶಿ ಹುದ್ದೆಗೆ ಮಾರ್ಚ್ 13ರಂದು ನಡೆದ ಚುನಾವಣೆಯಲ್ಲಿ ಮೇತ್ರಿ ಸ್ಪರ್ಧಿಸಿದ್ದರು. ಅವರು ನಾರ್ತ್ವೇಲ್ಸ್ನಿಂದ ಮೊದಲ ಭಾರತೀಯ ದನಿಯಾಗಿದ್ದಾರೆ.
ರಾಜೀವ್ ನಮ್ಮ ಭಾರತೀಯ ಸಮುದಾಯದವರು ಮಾತ್ರವೇ ಅಲ್ಲದೆ ಪ್ರತಿ ಮಾನವಜೀವಿ ಹಾಗೂ ಅಗತ್ಯವಿರುವ ಸಮುದಾಯ-ಸಂಸ್ಥೆಗಳ ಮಹಾನ್ ಬೆಂಬಲಿಗರಾಗಿದ್ದಾರೆ. ರಾಜ್ ಅವರು ಬ್ರಿಟಿಷ್ ಭಾರತೀಯ ನರ್ಸ್ಗಳ ಸಂಘದ (ಬಿಐಎನ್ಎ) ವೇಲ್ಸ್ನ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದಾರೆ. ಅವರು ನಮ್ಮ ಬಿಸಿಯುಎಚ್ಬಿ (ವೇಲ್ಸ್ನ ಬಿಗ್ಗೆಸ್ಟ್ ಹೆಲ್ತ್ ಬೋರ್ಡ್) ಬಿಸಿಯುನಿಟಿಯ (ಬಿಎಂಇ ಗ್ರೂಪ್) ಚೇರ್ ಕೂಡ ಆಗಿದ್ದಾರೆ.
ಏಕೈಕ ಭಾರತೀಯ: ರಾಜ್ ಅವರು ಇಡೀ ಯುನೈಟೆಡ್ ಕಿಂಗ್ಡಂನಲ್ಲಿ ಎನ್ಎಚ್ಎಸ್ ಆಗಿ ಪೂರ್ಣ ಪ್ರಮಾಣದ ಉದ್ಯೋಗದ ಜೊತೆ ಜೊತೆಯಲ್ಲಿ ಟೌನ್ ಮತ್ತು ಕೌಂಟಿ ಎರಡರ ಕೌನ್ಸಿಲರ್ ಹುದ್ದೆಗಳನ್ನೂ ಹೊಂದಿರುವ, ಏಕೈಕ ಭಾರತೀಯ ಮತ್ತು ವಿಶೇಷವಾಗಿ ದಾದಿಯರ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. ಮೇತ್ರಿ ಅವರು ಮೂಲತಃ ಬೆಳಗಾವಿ ಜಿಲ್ಲೆ ದಡ್ಡಿ ಗ್ರಾಮದವರು. ಅವರ ತಂದೆ-ತಾಯಿ ಇಬ್ಬರೂ ಶಿಕ್ಷಕರು. ತಂದೆ ಈಗ ಇಲ್ಲ. ತಾಯಿ ಸ್ವಗ್ರಾಮದಲ್ಲೇ ವಾಸವಾಗಿದ್ದಾರೆ. ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿ, ಮೇತ್ರಿ ಅವರು ಇಷ್ಟು ಉನ್ನತ ಸ್ಥಾನಕ್ಕೇರಿದ್ದಾರೆ. 2001ರಿಂದ ಇಂಗ್ಲೆಂಡ್ನ ವೇಲ್ಸ್ನಲ್ಲಿ ನೆಲೆಸಿದ್ದಾರೆ.