

ಮುಂಬೈ : ದೆಹಲಿಯಿಂದ ಗೋವಾಗೆ ಹೋಗುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಟನೆಲ್ನಲ್ಲಿ ಹಳಿತಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಈ ದುರ್ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೂ ಪೆಟ್ಟು ಬಿದ್ದಿಲ್ಲ ಎನ್ನಲಾಗಿದೆ.
"ದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣದಿಂದ ಮಡಗಾವ್ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ರತ್ನಗಿರಿ ಬಳಿಯ ಕರ್ಬುಡೆ ಟನೆಲ್ನಲ್ಲಿ ಹಳಿತಪ್ಪಿತು" ಎಂದು ಪಿಟಿಐ ವರದಿ ಮಾಡಿದೆ. ಮುಂಬೈನಿಂದ 325 ಕಿಲೋಮೀಟರ್ ದೂರದಲ್ಲಿ ಈ ದುರ್ಘಟನೆ ಸಂಭವಿಸಿದೆ. (ಏಜೆನ್ಸೀಸ್)