

ಜೈಪುರ: ಹೇಳಿದ್ದ ಜಿಲ್ಲಾ ಕೋರ್ಟ್ ಮ್ಯಾಜಿಸ್ಟ್ರೇಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಿಂದ ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿದ ಎಸ್‌ಟಿ, ಎಸ್‌ಸಿ ಸೆಲ್ ನ ಡಿವೈಎಸ್ಪಿ ಮೈನಾ ಮೀನಾ ಮಾತನಾಡಿ, ಹಿಂಡೌನ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ತನ್ನ ಸಂತ್ರಸ್ತೆ ಗಾಯ ನೋಡಲು ವಿವಸ್ತ್ರಗೊಳ್ಳುವಂತೆ ಹೇಳಿರುವುದಾಗಿ ಎಂದು ಆರೋಪಿಸಿ ಮಾರ್ಚ್ 30ರಂದು ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಕೋರ್ಟ್ನಲ್ಲಿ ತನ್ನ ಹೇಳಿಕೆಯನ್ನು ರೆಕಾರ್ಡ್ ಮಾಡಿದ ಬಳಿಕ ಬಟ್ಟೆ ಬಿಚ್ಚಿ ಗಾಯಗಳನ್ನು ತೋರಿಸಲು ತಿಳಿಸಲಾಯಿತು. ನಾನು ಅದನ್ನು ನಿರಾಕರಿಸಿದ್ದಾಗಿ ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಅತಿರೇಕದ ವರ್ತನೆ ಎಂದು ಪ್ರಕರಣ ದಾಖಲಾಗಿದೆ ಎಂದು ಡಿವೈಎಸ್ಪಿ ಮಾಹಿತಿ ನೀಡಿದ್ದಾರೆ.
ಮ್ಯಾಜಿಸ್ಟ್ರೇಟ್ ವಿರುದ್ಧ ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 345 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಮಾರ್ಚ್ 19 ರಂದು ಮಹಿಳೆ ಮೇಲೆ ಅತ್ಯಾಚಾರವೆಸಗಲಾಗಿದೆ ಮತ್ತು ಮಾರ್ಚ್ 27 ರಂದು ಹಿಂಡೌನ್ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.