ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರ ಉರುಳುವುದು ನಿಶ್ಚಿತವೆಂದ ಕೇಂದ್ರ ಸಚಿವ

Uniong Minister
Published on

ನವದೆಹಲಿ: ಇಡೀ ದೇಶಾದ್ಯಂತ ಕರೊನಾ ಬಿಕ್ಕಟ್ಟು ಎದುರಾಗಿದೆ. ಜನರೆಲ್ಲ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್​ ಪಕ್ಷ ರಾಜಸ್ಥಾನದಲ್ಲಿ ತನ್ನ ಸರ್ಕಾರ ಉಳಿಸಿಕೊಳ್ಳುವದರಲ್ಲೇ ಮಗ್ನವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಕೈಲಾಶ್​ ಚೌಧರಿ ಟೀಕಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯ ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ಶಾಸಕರು ಐಷಾರಾಮಿ ಹೋಟೆಲ್ ಸೇರಿ ಮಜಾ ಮಾಡುತ್ತಿದ್ದಾರೆ. ಸ್ವಿಮ್ಮಿಂಗ್​ ಪೂಲ್​, ಅಡುಗೆ ಎನ್ನುತ್ತ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಇದೆಲ್ಲದರ ಪರಿಣಾಮವನ್ನೂ ಕಾಂಗ್ರೆಸ್ ಅನುಭವಿಸುತ್ತದೆ. ಕೊನೆಗೆ ಖಂಡಿತ ಈ ಸರ್ಕಾರ ಉರುಳುತ್ತದೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಫೋನ್​ ಟ್ಯಾಪಿಂಗ್​ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೈಲಾಶ್​ ಚೌಧರಿ ಅವರು, ಕಾಂಗ್ರೆಸ್​ನವರಿಗೆ ಫೋನ್​ ಕದ್ದಾಲಿಕೆ ಮಾಡಲು ಏನು ಅಧಿಕಾರವಿದೆ? ಕಾಂಗ್ರೆಸ್​ ಒಳಗಿನ ಕಲಹಕ್ಕೆ ಬಿಜೆಪಿ ಕಾರಣವಲ್ಲ. ಆಡಿಯೋ ಕ್ಲಿಪ್​​ನಲ್ಲಿರುವುದು ಗಜೇಂದ್ರ ಜಿ ಅವರ ಧ್ವನಿಯಲ್ಲ. ಫೋನ್​ ಟ್ಯಾಪಿಂಗ್​ ಬಗ್ಗೆ ಕಾಂಗ್ರೆಸ್​ ಸ್ಪಷ್ಟ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net