ರಾಜಸ್ಥಾನ ವಿಧಾನಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕಾರ; ಸಿಎಎ ವಿರುದ್ಧ ನಿರ್ಣಯ ಅನುಮೋದಿಸಿದ ಮೂರನೇ ಅಸೆಂಬ್ಲಿ

RAJASTANA
Published on

ನವದೆಹಲಿ: ರಾಜಸ್ಥಾನ ವಿಧಾನಸಭೆ ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸುವ ನಿರ್ಣಯವನ್ನು ಶನಿವಾರ ಅಂಗೀಕರಿಸಿದೆ.

ಆಯವ್ಯಯ ಮಂಡನೆ ಅಧಿವೇಶನದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್​ ಮಂಡಿಸಿದ ಈ ನಿರ್ಣಯ ಅಂಗೀಕಾರವಾಯಿತು.

ಹೀಗೆ ಪೌರತ್ವ ತಿದ್ದಪಡಿ ಕಾಯ್ದೆಯನ್ನು ಅಂಗೀಕರಿಸಿದ ವಿಧಾನಸಭೆಗಳಲ್ಲಿ ರಾಜಸ್ಥಾನ ಮೂರನೇಯದು. ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ಕೇರಳ ಮತ್ತು ಪಂಜಾಬ್​ ರಾಜ್ಯ ವಿಧಾನಸಭೆಗಳು ಸಿಎಎ ವಿರುದ್ಧ ನಿರ್ಣಯವನ್ನು ಈಗಾಗಲೇ ಅಂಗೀಕರಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net