

ಮೈಸೂರು: ಪ್ರತಿಷ್ಠಿತ ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನಕ್ಕೆ ಅಧ್ಯಕ್ಷರಾಗಿ ರಾಜಶೇಖರ ಕದಂಬ, ಕಾರ್ಯದರ್ಶಿಯಾಗಿ ಕೆ.ಸಿ. ಮಹದೇವಶೆಟ್ಟಿ, ಸಂಚಾಲಕರಾಗಿ ರುದ್ರಣ್ಣ ಹರ್ತಿಕೋಟೆ ಮರು ಆಯ್ಕೆಯಾಗಿದ್ದಾರೆ.
ಇದೇ ತಿಂಗಳ ಜೂನ್ 15ರಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ಮೂವರನ್ನು ಆಯ್ಕೆ ಮಾಡಲಾಯಿತು. ಇನ್ನುಳಿದಂತೆ ಗೌರವಾಧ್ಯಕ್ಷರಾಗಿ ಪ್ರೊ.ಎಚ್.ಎಂ.ಪರಮೇಶ್ವರಯ್ಯ, ಉಪಾಧ್ಯಕ್ಷರಾಗಿ ಡಾ.ಮಾನಸ, ಸಹಕಾರ್ಯದರ್ಶಿಯಾಗಿ ಸಿ.ಚಿಕ್ಕಣ್ಣ. ಖಜಾಂಚಿಯಾಗಿ ಆರ್.ಚಂದ್ರಶೇಖರಯ್ಯ, ನಿರ್ದೇಶಕರುಗಳಾಗಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಕಾ.ತ. ಚಿಕ್ಕಣ್ಣ, ಡಾ.ಬಿ.ಕೆ. ರವಿ, ಎಸ್.ನಾಗಣ್ಣ, ಬಾಬುರಾವ್, ಡಾ.ಮೈಲಹಳ್ಳಿ ರೇವಣ್ಣ, ಡಾ.ಪರಶುರಾಂ.ಸಿ.ಡಿ. ಡಾ.ವಾಣಿಶ್ರೀ ಅರುಣ್. ಸೌಜನ್ಯ ಪರಮೇಶ್, ಶಂಕ ಹರ್ತಿಕೋಟೆ ಹಾಗೂ ಎಚ್.ಆರ್.ದಿನೇಶ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರು- ರಾಜಶೇಖರ ಕದಂಬ
ಕಾರ್ಯದರ್ಶಿ- ಕೆ.ಸಿ. ಮಹದೇವಶೆಟ್ಟಿ
ಸಂಚಾಲಕರು- ರುದ್ರಣ್ಣ ಹರ್ತಿಕೋಟೆ