ರಾಜನಾಥ್​ ಸಿಂಗ್ ಈಗ ಕೋವಿಡ್​ ಪಾಸಿಟಿವ್! ಹೋಮ್​ ಕ್ವಾರಂಟೈನ್​ನಲ್ಲಿ ರಕ್ಷಣಾ ಮಂತ್ರಿ

Rajanath Singh
Published on

ನವದೆಹಲಿ: ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರು ಗುರುವಾರ ಕರೊನಾ ಪರೀಕ್ಷೆಗೆ ಒಳಪಟ್ಟಿದ್ದು ಫಲಿತಾಂಶ ಪಾಸಿಟಿವ್​ ಬಂದಿದೆ. ಈ ಹಿನ್ನೆಲೆಯಲ್ಲಿ ದೇಶದ ರಕ್ಷಣಾ ಸಚಿವರು ಪ್ರಸ್ತುತ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.

ವೈದ್ಯರ ತಂಡ ಅವರನ್ನು ಪರೀಕ್ಷಿಸಿ ಕೆಲವು ದಿನಗಳ ಕಾಲ ವಿಶ್ರಾಂತಿಗೆ ಶಿಫಾರಸು ಮಾಡಿದೆ. ಅಧಿಕೃತ ಪ್ರಕಟಣೆಯ ಪ್ರಕಾರ ಸಚಿವರು ಪ್ರಸ್ತುತ ಆತಂಕಕಾರಿ ಅಲ್ಲದ ರೋಗ ಲಕ್ಷಣಗಳೊಂದಿಗೆ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸದ ರಾಜನಾಥ್​ ಸಿಂಗ್

ರಾಜನಾಥ್​ ಸಿಂಗ್ ಇಂದು ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ವಾಯುಪಡೆಯ ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಬೇಕಿತ್ತು. ಆದರೆ ಕೋವಿಡ್​ ಪಾಸಿಟಿವ್​ ವರದಿ ಬಂದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಅವರ ಭಾಗವಹಿಸುವಿಕೆ ರದ್ದಾಗಿದೆ.

ಬುಧವಾರ ಅವರು ಸೇನಾ ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಅವರು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಇತರ ಹಿರಿಯ ಸೇನಾ ಅಧಿಕಾರಿಗಳೊಂದಿಗೆ ಇದ್ದರು. ಅವರು ಸಣ್ಣ ಶಸ್ತ್ರಾಸ್ತ್ರ ಫೈರಿಂಗ್ ಸಿಮ್ಯುಲೇಟರ್‌ನಲ್ಲಿ ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net