ಮಹೇಶ್​ ಬಾಬುಗೆ ಸ್ಕ್ರಿಪ್ಟ್ ವಿವರಿಸಲಿದ್ದಾರೆ ರಾಜಮೌಳಿ; ಅಸಲಿ ವರದಿ ಹೇಳುವುದೇನು?

Untitled design - 2023-10-09T104837.779
Published on

ಆಂಧ್ರಪ್ರದೇಶ: ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು ಸದ್ಯ 'ಗುಂಟೂರು​ ಖಾರಂ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಮುಂದಿನ ವರ್ಷದಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ.

ಈ ಮಧ್ಯೆ ಭಾರತೀಯ ಚಿತ್ರರಂಗದ ಸ್ಟಾರ್​ ನಿರ್ದೇಶಕ, 'ಆರ್​ಆರ್​ಆರ್'​ ಖ್ಯಾತಿಯ ಎಸ್​.ಎಸ್​. ರಾಜಮೌಳಿ ಮಹೇಶ್​ಗೆ ಹೊಸ ಸಿನಿಮಾದ ಸ್ಕ್ರಿಪ್ಟ್​ ವಿವರಿಸಲಿದ್ದಾರೆ ಎಂಬ ಸುದ್ದಿ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಸಂಗತಿ ಬಗ್ಗೆ ಅಸಲಿ ವರದಿ ಹೇಳುವುದೇನು? ಇಲ್ಲಿದೆ ಮಾಹಿತಿ.

'ಆರ್‌ಆರ್‌ಆರ್' ಮೂಲಕ ಬ್ಲಾಕ್​ಬಸ್ಟರ್​ ಹಿಟ್​ ನೀಡಿದ ನಿರ್ದೇಶಕ ರಾಜಮೌಳಿ ಮುಂದೆ ಯಾವ ರೀತಿ ಸಿನಿಮಾ ಮಾಡಲಿದ್ದಾರೆ? ಮುಂದಿನ ಚಿತ್ರಗಳ ಕಥಾಹಂದರ ಹೇಗಿರಲಿದೆ ಎಂಬ ಹತ್ತು ಹಲವು ಪ್ರಶ್ನೆಗಳು ಸಿನಿಪ್ರೇಕ್ಷಕರಲ್ಲಿ ಮೂಡಿದೆ. ಆದ್ರೆ, ಯಾವ ರೀತಿಯ ಚಿತ್ರ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಸದ್ಯ ರಾಜಮೌಳಿ ಅವರು ಮಹೇಶ್ ಬಾಬು ಅವರಿಗೆ ಆ್ಯಕ್ಷನ್ ಜಾನರ್​ ಒಳಗೊಂಡ ಚಿತ್ರವೊಂದರ ಕಥೆಯನ್ನು ಹೇಳಲು ಭೇಟಿ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಮೂಲಗಳ ಪ್ರಕಾರ ಈ ಸುದ್ದಿ ಸುಳ್ಳು ಎಂದು ಹೇಳಲಾಗಿದ್ದು, ಮಹೇಶ್​ ಬಾಬು ಅವರಿಗೆ ರಾಜಮೌಳಿ ಯಾವ ಕಥೆಯನ್ನು ಹೇಳಲು ಭೇಟಿಯಾಗುತ್ತಿಲ್ಲ. ಮಹೇಶ್ ಬಾಬು ಅವರು ಸದ್ಯ ಹೈದ್ರಾಬಾದ್​ನ ಹೊರವಲಯದಲ್ಲಿ 'ಗುಂಟೂರು ಕಾರಂ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net