ರಾಜಾ ರಘುವಂಶಿ ಕೊಲೆ ಪ್ರಕರಣ; ಚಾರ್ಜ್​ಶೀಟ್​ನಲ್ಲಿ ದೋಷಗಳಿವೆ ಎಂದು ಜಾಮೀನಿಗೆ ಅರ್ಜಿ ಸಲ್ಲಿಸಿದ ಸೋನಂ ರಘುವಂಶಿ| Bail Petition

Untitled design (13)
Published on

Bail Petition: ಭಾರತದಲ್ಲೇ ಸಂಚಲನ ಮೂಡಿಸಿದ್ದ ಮೇಘಾಲಯದಲ್ಲಿ ಹನಿಮೂನ್​ಲ್ಲಿದ್ದಾಗ ನಡೆದ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಪತ್ನಿ ಸೋನಂ ರಘುವಂಶಿ ಜಾಮೀನು ನೀಡುವಂತೆ ಕೋರಿ ಸ್ಥಳೀಯ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಶನಿವಾರ(ಸೆ. 13) ವರದಿಯಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇಘಾಲಯ ಪೊಲೀಸರು ಸಲ್ಲಿಸರುವ ಚಾರ್ಜ್​ಶೀಟ್​ನಲ್ಲಿ ಹಲವು 'ದೋಷ'ಗಳಿವೆ ಎಂದು ಆರೋಪಿಸಿ ಸೋನಂ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಸೊಹ್ರಾ ಉಪವಿಭಾಗದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಕೆಯ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ನಿಗದಿಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ತುಷಾರ್ ಚಂದ್ರ, ಶುಕ್ರವಾರ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ, ಆದರೆ ಪ್ರಾಸಿಕ್ಯೂಷನ್ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಲು ಸಮಯ ಕೇಳಿದೆ ಎಂದು ಹೇಳಿದ್ದಾರೆ.

ರಾಜಾ ರಘುವಂಶಿ ಮೇಘಾಲಯಕ್ಕೆ ಹನಿಮೂನ್​ಗೆ ಹೋದಾಗ ಸೊಹ್ರಾದಲ್ಲಿನ ವೈಸಾವ್ಡಾಂಗ್ ಬಳಿಯ ನಿರ್ಜನ ಪಾರ್ಕಿಂಗ್ ಸ್ಥಳದಲ್ಲಿ ಮೂವರು ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿದ್ದರು. ರಘುವಂಶಿ ಪತ್ನಿ ಮತ್ತು ಆಕೆಯ ಗೆಳೆಯ ರಾಜ್ ಕುಶ್ವಾಹ ಕೊಲೆಗೆ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

ಈ ವರ್ಷದ ಮೇ ತಿಂಗಳಲ್ಲಿ ಹನಿಮೂನ್​ಗಾಗಿ ಮೇಘಾಲಯಕ್ಕೆ ಹೋದ ರಾಜಾ ಮತ್ತು ಸೋನಮ್ ನಾಪತ್ತೆಯಾಗಿದ್ದರು ಎಂದು ಮೊದಲು ಸುದ್ದಿಯಾಗಿತ್ತು. ಬಳಿಕ ವ್ಯಾಪಕ ಶೋಧ ಕಾರ್ಯಾಚರಣೆಯಾಗಿ ಅಂತಿಮವಾಗಿ ರಾಜಾ ಅವರ ಮೃತದೇಹ ಪತ್ತೆಯಾಗಿತ್ತು. ಆದರೆ ಪತ್ನಿ ಸೋನಂ ಪತ್ತೆಯಾಗಿರಲಿಲ್ಲ. ಈ ವೇಳೆ ಪತ್ನಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ ದೊಡ್ಡ ಸುದ್ದಿಯಾಗಿತ್ತು. ಆ ಬಳಿಕ  ಮೇಘಾಲಯದ ತನಿಖಾಧಿಕಾರಿಗಳು ಇತರ ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಸೋನಮ್ ಉತ್ತರ ಪ್ರದೇಶದ ಪೊಲೀಸರ ಮುಂದೆ ಶರಣಾಗಿದ್ದಳು.

ಕಳೆದ ವಾರ ಮೇಘಾಲಯ ಪೊಲೀಸರು ಸೋನಮ್, ರಾಜ್ ಮತ್ತು ಮೂವರು ಕೊಲೆಗಾರರಾದ ವಿಶಾಲ್ ಸಿಂಗ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ​​ವಿರುದ್ಧ 790 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net