ರಾಜಭವನ ಸಾರ್ವಜನಿಕ ವೀಕ್ಷಣೆಗೆ ಎರಡು ದಿನ ಅವಕಾಶ; ಉಚಿತ ಪ್ರವೇಶ: ಗೌರ್ನರ್​ ವಿಶೇಷ ಕಾರ್ಯದರ್ಶಿ ಮಾಹಿತಿ | RajBhavan

dk (77)
Published on

ಬೆಂಗಳೂರು: 76ನೇ ಗಣರಾಜ್ಯೋತ್ಸವದ ನಿಮಿತ್ತ ದಿನಾಂಕ 26 ಮತ್ತು 27 ಜನವರಿ ರಂದು ರಾಜಭವನಕ್ಕೆ( RajBhavan) ಸಾರ್ವಜನಿಕರ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ತಿಳಿಸಿದ್ದಾರೆ.

ಸಾರ್ವಜನಿಕರು ಮುಖ್ಯದ್ವಾರದ ಮೂಲಕ ಉಚಿತ ಪ್ರವೇಶ ಪಡೆಯಬಹುದಾಗಿದೆ. ರಾಜಭವನ ಪ್ರವೇಶ ಪಡೆಯಲಿಚ್ಚಿಸುವವರು ಆಧಾರ್ ಕಾರ್ಡ್ ಅಥವಾ ಭಾವಚಿತ್ರವಿರುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವೇಶದ ಸಮಯ: ಸಂಜೆ 6 ರಿಂದ 7.30

ಸಾರ್ವಜನಿಕರು ಯಾವುದೇ ರೀತಿಯ ಕ್ಯಾಮರಾ, ಕೈ ಚೀಲ, ಚೂಪಾದ ವಸ್ತುಗಳು, ತಿಂಡಿ-ತಿನಿಸು, ಪ್ಲಾಸ್ಟಿಕ್ ವಸ್ತುಗಳು ಇನ್ನಿತರ ಯಾವುದೇ ಲಗೇಜ್ ಬ್ಯಾಗ್ ತರುವಂತಿಲ್ಲ. ರಾಜಭವನದ ಒಳಗಡೆ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ ಎಂದಿದ್ದಾರೆ.

ಸಾರ್ವಜನಿಕರು ಭದ್ರತಾ ಸಿಬ್ಬಂದಿಗಳು ನೀಡುವ ಸೂಚನೆಗಳನ್ನು ಪಾಲಿಸಿ, ಸಹಕರಿಸಬೇಕಾಗಿ ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net