

* ಕಿರುವಾರ ಎಸ್.ಸುದರ್ಶನ್ ಕೋಲಾರ
ಆರಂಭದಲ್ಲಿ ಮುನಿಸಿಕೊಂಡಿದ್ದ ಮುಂಗಾರು ವಾರದಿಂದ ಜಿಲ್ಲೆಯ ಮೇಲೆ ಕರುಣೆ ತೋರಿದ್ದು, ಭೂಮಿ ಹದ ಮಾಡಿಕೊಂಡು ಕುಳಿತಿದ್ದ ರೈತರು ಈಗ ಬಿತ್ತನೆಗೆ ಸಿದ್ಧತೆ ಕೈಗೊಂಡಿದ್ದಾರೆ.
ಈ ವಾರ ಸುರಿದ ಉತ್ತಮ ಮಳೆಯಿಂದ ಕೃಷಿ ಚಟುವಟಿಕೆ ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿದ್ದು, ಇನ್ನೂ ಶೇ.68.1 ಬಿತ್ತನೆ ಸಾಧನೆಯಾಗಬೇಕಿದೆ.
ಮುಂಗಾರು ಹಂಗಾಮು ಆರಂಭವಾಗಿ ಒಂದೂವರೆ ತಿಂಗಳು ಕಳೆದಿದೆ. ಜೂನ್ ಮತ್ತು ಜುಲೈನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಮಾರ್ಚ್, ಏಪ್ರಿಲ್ನಲ್ಲೂ ನಿರೀತ ಮಟ್ಟದಲ್ಲಿ ಆಗದ ಕಾರಣ ಇದು ಬಿತ್ತನೆ ಕಾರ್ಯದ ಮೇಲೂ ಪರಿಣಾಮ ಬೀರಿತ್ತು.
ಸತತವಾಗಿ 4 ದಿನ ಬಿದ್ದ ಮಳೆಗೆ ಭೂಮಿ ಹೆಚ್ಚು ತೇವಾಂಶ ಇರುವುದರಿಂದ ಬಿತ್ತನೆಗೆ ಸೂಕ್ತವಾಗಿಲ್ಲ. ಒಂದು ದಿನ ಬಿಡುವು ನೀಡಿದರೆ ಉಳುಮೆ ಮಾಡಲು ರೈತರು ಮುಂದಾಗಲಿದ್ದಾರೆ.
ನೀರಾವರಿ ಪ್ರದೇಶದಲ್ಲಿ 6,110 ಹೆಕ್ಟೇರ್ ಹಾಗೂ ಮಳೆ ಆಶ್ರಯದಲ್ಲಿ 67,790 ಹೆಕ್ಟೇರ್ ಸೇರಿ ಒಟ್ಟು ನೀರಾವರಿ 946 ಹಾಗೂ ಮಳೆಯಾಶ್ರಿತ 22,664 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇದುವರೆಗೂ ಶೇ.31.9 ಗುರಿ ಸಾಧನೆಯಾಗಿದೆ.
ಜಿಲ್ಲೆಯಲ್ಲಿ ಸುಮಾರು ರೈತರು ಮಳೆಯಾಶ್ರಿತ ಬೆಳೆಗಳಿಗೆ ಅವಲಂಬನೆಯಾಗಿದ್ದು, ರಾಗಿ, ಭತ್ತ, ಮುಸುಕಿನ ಜೋಳ, ಅಲಸಂದೆ, ತೊಗರಿ, ನೆಲಗಡಲೆ, ಅವರೆ ನಾಟಿ ಮಾಡುತ್ತಾರೆ. ರಾಗಿ, ಅಲಸಂದೆ, ಅವರೆ ಬಿತ್ತನೆಗೆ ಇನ್ನು ಕಲಾವಕಾಶವಿದ್ದು, ಬಿತ್ತನೆ ಕಾರ್ಯ ಮತ್ತಷ್ಟು ಪ್ರಗತಿಯಾಗಲಿದೆ.
ಬಿತ್ತನೆ ವಿವರ
ಮುಂಗಾರಿನ ಆರಂಭದಲ್ಲೇ ನೆಲಗಡಲೆ, ಎಳ್ಳು ಬಿತ್ತನೆ ಆರಂಭಗೊಳ್ಳುತ್ತದೆ. ಒಟ್ಟು 6,000 ಹೆಕ್ಟೇರ್ ಗುರಿಗೆ 2,574 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಎಳ್ಳು 10 ಹೆಕ್ಟೇರ್ ಗುರಿಗೆ 22 ಹೆಕ್ಟೇರ್, ಹುಚ್ಚೆಳ್ಳು 195 ಹೆಕ್ಟೇರ್, 360 ಹೆಕ್ಟೇರ್ ಬಿತ್ತನೆಯಾಗಿದ್ದರೆ ಹರಳು 150 ಹೆಕ್ಟೆರ್ ಗುರಿ ಇದ್ದರೂ ರೈತರು ಈವರೆಗೆ ಬಿತ್ತನೆಗೆ ಮುಂದಾಗಿಲ್ಲ. ತೊಗರಿ ಒಟ್ಟು 1000 ಹೆಕ್ಟೇರ್ ಪ್ರದೇಶ ಪೈಕಿ 680 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಅಲಸಂದೆ 100 ಹೆಕ್ಟೇರ್ ಗುರಿಗೆ 170 ಹೆಕ್ಟೇರ್, ಅವರೆ 5,000 ಹೆಕ್ಟೇರ್ಗೆ 754 ಹೆಕ್ಟೇರ್ ಬಿತ್ತನೆ ನಡೆದಿದೆ. ರಾಗಿ 1,7451 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಇನ್ನು ಆಗಸ್ಟ್ ಹಾಗೂ ಸೆಪ್ಟೆಂಬರ್ ಮೊದಲ ವಾರದ ತನಕ ರಾಗಿ ಬಿತ್ತನೆಗೆ ಕಾಲವಕಾಶವಿದೆ. ಮೇವಿನ ಜೋಳಕ್ಕೆ ಬೇಡಿಕೆ ಇದ್ದು, 920 ಹೆಕ್ಟೇರ್ ಗುರಿಗೆ 939 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಜಾನುವಾರುಗಳ ಮೇವಿಗೆ ಅನುಕೂಲವಾಗುವುದರಿಂದ ಜಿಲ್ಲೆಯ ರೈತರು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಗೆ ಒಲವು ತೋರಿದ್ದಾರೆ. ಜತೆಗೆ 11 ಹೆಕ್ಟೇರ್ ಪ್ರದೇಶದಲ್ಲಿ ಸಿರಿ ಧಾನ್ಯದತ್ತ ರೈತರು ಒಲವು ತೋರಿದ್ದಾರೆ.
ಕೋಟ್...
ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು. ರಸಗೊಬ್ಬರ ಕೊರತೆಯಾಗದಂತೆ ಎಚ್ಚರವಹಿಸಲಾಗಿದೆ. ಕಳೆದ ವಾರದಿಂದ ಉತ್ತಮ ಮಳೆಯಾಗುತ್ತಿದೆ. ರಾಗಿ ಬಿತ್ತನೆಗೆ ಇನ್ನಷ್ಟು ಕಾಲಾವಕಾಶವಿದ್ದು, ಬಿತ್ತನೆಯಲ್ಲಿ ಉತ್ತಮ ಸಾಧನೆಯಾಗುವ ನಿರೀೆಯಿದೆ.
- ಎಂ.ಆರ್.ಸುಮಾ, ಕೃಷಿ ಜಂಟಿ ನಿರ್ದೇಶಕಿ, ಕೋಲಾರ
ಕೋಟ್...
ಜಿಲ್ಲೆಯಲ್ಲಿ ಕೃಷಿಯನ್ನೇ ಹೆಚ್ಚು ರೈತರು ನಂಬಿಕೊಂಡಿದ್ದು, ಕಳೆದ ತಿಂಗಳುಗಳಲ್ಲಿ ಮಳೆ ಕೊರತೆಯಿಂದ ಬಿತ್ತನೆಗೆ ಅಡ್ಡಿಯಾಗಿದೆ. ಇದೀಗ ಮಳೆ ಬೀಳುತ್ತಿದ್ದು ಉಳುಮೆ ಮಾಡಿ ಇಟ್ಟುಕೊಂಡಿದ್ದ ಹೊಲದಲ್ಲಿ ಬಿತ್ತನೆ ಮಾಡಲಾಗುತ್ತಿದೆ.
- ರಮೇಶ್, ರೈತ, ತೊಟ್ಲಿ
ತಾಲೂಕುವಾರು ಸಾಧನೆ
ತಾಲೂಕು ಬಿತ್ತನೆ ಗುರಿ (ಹೆ) ಸಾಧನೆ (ಹೆ) ಶೇ
ಬಂಗಾರಪೇಟೆ 11,999 8,177 68.15
ಕೆಜಿಎ್ 6,376 3,122 48.96
ಕೋಲಾರ 14,334 4,348 30.33
ಮಾಲೂರು 11,987 1,314 10.96
ಮುಳಬಾಗಿಲು 18,136 5,323 3.77
ಶ್ರೀನಿವಾಸಪುರ 10,068 380 3.77
ಒಟ್ಟು 72,900 22,664 31.09