

ರಾಣೆಬೆನ್ನೂರ: ರಾಣೆಬೆನ್ನೂರ ನಗರದಿಂದ ಹುಲ್ಲತ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 4 ಕಿ.ಮೀ. ದೂರದ ರಸ್ತೆ ಮಳೆ ಬಂದಾಗ ಸಂರ್ಪೂಣ ಮುಳಗಿ ಹೋಗುತ್ತಿದ್ದು, ಗ್ರಾಮಸ್ಥರಿಗೆ ಪರ್ಯಾಯವಾಗಿ ದೇವರುಗಡ್ಡ ರಸ್ತೆಗೆ ಸಂಪರ್ಕ ಕಲ್ಪಿಸಲು ಹೊಸ ರಸ್ತೆ ನಿಮಿರ್ಸಿಕೊಡಬೇಕು ಎಂದು ಒತ್ತಾಯಿಸಿ ಹುಲ್ಲತ್ತಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥ ಜಗದೀಶ ಕೆರೂಡಿ ಮಾತನಾಡಿ, ಮಳೆ ಬಂದಾಗ ಹಳೆಯ ರಸ್ತೆ ಸಂರ್ಪೂಣ ಜಲಾವೃತವಾಗುವ ಕಾರಣ ಗ್ರಾಮದ ವಿದ್ಯಾಥಿರ್ಗಳು, ಕೂಲಿ ಕಾಮಿರ್ಕರು ಹಾಗೂ ಇತರ ಜನ ನಗರಕ್ಕೆ ತೆರಳಲು ಆಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಗ್ರಾಮಕ್ಕೆ ಹತ್ತಿರವಿರುವ ದೇವರಗುಡ್ಡ ರಸ್ತೆ (ಬಿಳಿಗಿರಿರಂನಬೆಟ್ಟ&ಬಾಗಲಕೋಟೆ) ರಾಜ್ಯ ಹೆದ್ದಾರಿ ಹೊಸ ರಸ್ತೆ ನಿಮಿರ್ಸಿಕೊಟ್ಟರೆ ಮಳೆ ಬಂದಾಗ ಸಮಸ್ಯೆ ಎದುರಾಗುವುದಿಲ್ಲ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿ ಐಶ್ವರ್ಯ ಎಚ್.ಎಂ. ಅವರಿಗೆ ಮನವಿ ಸಲ್ಲಿಸಿದರು.
ಪ್ರಮುಖರಾದ ಶಿವಪ್ಪ ಕೆರೂಡಿ, ರಾಜು ಓಲೇಕಾರ, ಮಾರುತಿ ದೊಡ್ಡಮನಿ, ನಾಗರಾಜ ಓಲೇಕಾರ, ನಾಗರಾಜ ಕಂಬಳಿ, ಮಂಜು ಗಂಗಮ್ಮನವರ, ರಮೇಶ ಹಳ್ಳಿ, ಪ್ರಶಾಂತ ಓಲೇಕಾರ ಮತ್ತಿತರರು ಇದ್ದರು.