ನದಿಪಾತ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಎಚ್ಚರಿಕೆ

1PGEB_j5_400x400
Published on

ಹಾವೇರಿ: ಜಿಲ್ಲೆಯ ನದಿ, ಹಳ್ಳ ಹಾಗೂ ಕೆರೆಗಳಲ್ಲಿ ನಿರಂತರ ಮಳೆಯಿಂದ ನೀರಿನ ಮಟ್ಟ ಏರಿಕೆಯಾಗಿದ್ದು, ಯಾರೂ ನದಿ ಹಾಗೂ ಹಳ್ಳಗಳಿಗೆ ಇಳಿಯಬಾರದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ ಮೂರ‌್ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ನೀರಿನ ಮಟ್ಟ ಇನ್ನೂ ಏರಿಕೆಯಾಗಲಿದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಜನತೆ ನದಿ, ಹಳ್ಳ ಹಾಗೂ ಕೆರೆಗಳ ಆಳ ತಿಳಿಯದೆ ಜಾನುವಾರುಗಳನ್ನು ನೀರಿಗೆ ಬಿಡಬಾರದು. ಇಂತಹ ಪ್ರದೇಶಗಳಲ್ಲಿ ಜನತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net