ಗದಗದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಬೆಳೆಹಾನಿ ಭಯದಲ್ಲಿ ರೈತರು

Rain 1 March 20
Published on

ಗದಗ:  ರಾಜ್ಯದ ಕೆಲವೆಡೆ ಅಲ್ಲಲ್ಲಿ ಮಳೆಯಾಗುತ್ತಿದೆ. ಮೂರು ದಿನಗಳ ಹಿಂದೆ ಮಂಗಳೂರು, ಪುತ್ತೂರಿನಲ್ಲಿ ಮಳೆ ಸುರಿದಿತ್ತು.

ಇಂದು ಗದಗದಲ್ಲಿ ಅಕಾಲಿಕ ಮಳೆಯಾಗಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಜಿಟಿಜಿಟಿ ಮಳೆಯಾಗಿದ್ದು, ಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ತಂಪೆರೆದಿದೆ. ಆದರೆ ರೈತರಿಗೆ ಬೆಳೆಹಾನಿಯ ಭಯ ಎದುರಾಗಿದೆ.

ನರಗುಂದ, ಮುಂಡರಗಿ, ಶಿರಹಟ್ಟಿ, ರೋಣ ಸೇರಿ ಹಲವೆಡೆ ಮಳೆಯಾಗಿದ್ದು ವರದಿಯಾಗಿದೆ. ಇಂದು ಬೆಳಗಾವಿಯಲ್ಲು ಮಳೆಯಾಗಿದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net