

ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ರೇವತಿ ಮಳೆ ಆರ್ಭಟ ಮುಂದು ವರಿದಿದ್ದು, ಬಿರುಗಾಳಿ ಸಹಿತ ಮಳೆಗೆ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆ, ಮನೆಗಳಿಗೆ ಹಾನಿಯಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಿವಿಧೆಡೆ ಅಡಕೆ, ತೆಂಗು, ಬಾಳೆ ಸೇರಿ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ಚಳ ಮಡು-ಹುಲಗಲಕುಂಟೆ ಗ್ರಾಮದಲ್ಲಿ ಗುಡಿಸಲು, ಸೀಟು ಮನೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ, ಬೀರೂರು ಭಾಗದಲ್ಲಿ ಧಾರಾಕಾರ ಮಳೆ ಬಿದ್ದರೆ, ಆಲ್ದೂರು-ಕಳಸ ಹಾಗೂ ಬೆಂಗಳೂರು ನಗರದಲ್ಲಿ ಉತ್ತಮ ವರ್ಷಧಾರೆಯಾಗಿದೆ.
ಕಡೂರು ತಾಲೂಕಿನ ಹಳೇಪೇಟೆಯಲ್ಲಿ 3 ಸಾವಿರ ಬಾಳೆ ಗಿಡಗಳು ಗಾಳಿ-ಮಳೆಗೆ ಗೊನೆಸಹಿತ ನೆಲಕ್ಕುರುಳಿವೆ. ಮುಂಡರಗಿ ಪಟ್ಟಣದಲ್ಲೂ ಗಾಳಿ-ಮಳೆಗೆ ಅನೇಕ ಕಡೆ ಬಾಳೆ ಗಿಡಗಳು ಮುರಿದುಬಿದ್ದಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.