ಮಳೆ ಬಿದ್ದ ಹಿನ್ನೆಲೆಯಲ್ಲಿ ತಗ್ಗಿದ ವಿದ್ಯುತ್ ಬೇಡಿಕೆ

New Power cut new
Published on

ಬೆಂಗಳೂರು:
ಕಳೆದ ಮೂರು ದಿನಗಳಿಂದ ಉತ್ತಮ ಮಳೆ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ 3 ರಿಂದ 4 ಸಾವಿರ ಮೆಗಾವ್ಯಾಟ್ ಕಡಿಮೆಯಾಗಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಕಳೆದ ವಾರ 15 ಸಾವಿರ ಮೆವಾ ಇದ್ದ ವಿದ್ಯುತ್ ಬೇಡಿಕೆ 11 ಸಾವಿರ ಮೆವಾ ಕ್ಕೆ ಇಳಿದಿದೆ. ಈ ವರ್ಷದ ಗರಿಷ್ಠ ಬೇಡಿಕೆ 16 ಸಾವಿರ ಮೆಗಾವ್ಯಾಟ್‌ಗೆ ಜಿಗಿದಿದ್ದು ದಾಖಲೆಯಾಗಿತ್ತು.
ಶುಕ್ರವಾರ ಬೆಸ್ಕಾಂನಲ್ಲಿ ಅತಿ ಹೆಚ್ಚು 5485 ಮೆವಾ ಬೇಡಿಕೆ ಇದ್ದರೆ, ಅತಿ ಕಡಿಮೆ ಬೇಡಿಕೆ ಸೆಸ್ಕ್‌ನಲ್ಲಿ 1043 ಮೆವಾ ದಾಖಲಾಗಿದೆ. ಜೆಸ್ಕಾಂನಲ್ಲಿ 1126 ಮೆವಾ, ಹೆಸ್ಕಾಂನಲ್ಲಿ 1683 ಮೆವಾ, ಮೆಸ್ಕಾಂನಲ್ಲಿ 1201 ಮೆವಾ ವಿದ್ಯುತ್ ಬೇಡಿಕೆ ಇತ್ತು.
ಮಳೆ ಬಿದ್ದ ಕಾರಣ ವಿಶೇಷವಾಗಿ ರೈತರು ಪಂಪ್ ಸೆಟ್‌ಗಳನ್ನು ಬಳಕೆ ಮಾಡುವುದು ಗಣನೀಯವಾಗಿ ತಗ್ಗಿದೆ. ಸಾಧಾರಣ ವಾತಾವರಣ ಎಲ್ಲೆಡೆ ಇರುವುದರಿಂದ ಗ್ರಾಹಕರ ಗೃಹೋಪಯೋಗಿ ವಿದ್ಯುತ್ ಬಳಕೆ ಪ್ರಮಾಣವೂ ಕಡಿಮೆಯಾಗಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net