ಕಾರ್ಕಳದಲ್ಲಿ ಮಳೆಗೆ ಹಾನಿ

rain
Published on

ಕಾರ್ಕಳ: ಮಂಗಳವಾರ ಸಂಜೆ ಸುರಿದ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಪತ್ತೊಂಜಿ ಕಟ್ಟೆಯ ವಸಂತಿ ಎಂಬುವರ ಮನೆಯ ಶೀಟ್ ಮುರಿದು ನಷ್ಟ ಸಂಭವಿಸಿದೆ. ಪತ್ತೊಂಜಿ ಕಟ್ಟೆ ನಿವಾಸಿ ಅಮಿತ ಎಂಬುವರ ಮನೆಗೆ ತೆಂಗಿನ ಮರ ಬಿದ್ದು ಹೆಂಚು ಮುರಿದಿದೆ. ಜಯಂತಿ ಎಂಬುವರ ವಾಸದ ಮನೆಯ ಹೆಂಚು ಗಾಳಿಗೆ ಹಾರಿ ಹೋಗಿ ನಷ್ಟ ಸಂಭವಿಸಿದೆ.

ತಾಲೂಕು ಕೀಡಾಂಗಣದಲ್ಲಿ(ಮಂಗಳಾ ಸ್ಟೇಡಿಯಂ) ನಿರ್ಮಾಣ ಹಂತದಲ್ಲಿರುವ ಒಳಾಂಗಣ ಕ್ರೀಡಾಂಗಣದ ಮಹಡಿಗೆ ಅಳವಡಿಸಿದ್ದ ಶೀಟು ಹಾರಿ ಹೋಗಿ ಹಾನಿಯಾಗಿದೆ. ಆನೆಕೆರೆ ರಸ್ತೆ ಸಮೀಪದ ಗೂಡಂಗಡಿಗಳಿಗೆ ಅಳವಡಿಸಿದ್ದ ಶೀಟುಗಳು ಗಾಳಿಯ ರಭಸಕ್ಕೆ ಹಾರಿ ರಸ್ತೆಯಲ್ಲೆಲ್ಲಾ ಹರಡಿದೆ. ಗಾಳಿ ಮಳೆಯಿಂದಾಗಿ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್‌ನ ಮುಂಭಾಗದ ರಸ್ತೆಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಮುಡಾರು ಗ್ರಾಮದಲ್ಲಿ 7 ಸಾವಿರ ಕೋಳಿಗಳಿದ್ದ ಕೋಳಿ ಶೆಡ್‌ನ ಮೇಲ್ಛಾವಣಿ ಸಂಪೂರ್ಣವಾಗಿ ಜಖಂಗೊಂಡಿದೆ. ಎರಡೂವರೆ ಸಾವಿರ ಕೋಳಿಗಳು ಮೃತಪಟ್ಟಿವೆ. ಗ್ರಾಮದ ವಿವಿಧೆಡೆ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net