

ರಾಯಚೂರು: ಬರೋಬ್ಬರಿ 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದೇವದುರ್ಗ ಹಾಗೂ ಮಾನ್ವಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಸವರಾಜ ಕಾಕರಗಲ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಿರವಾರದಲ್ಲಿರುವ ವೈನ್ ಶಾಪ್ ಮೇಲೆ ಯಾವುದೇ ದೂರು ದಾಖಲಿಸದಿರುವುದಕ್ಕೆ ಎರಡು ಲಕ್ಷ ರೂ.ಗೆ ಇನ್ಸ್ಪೆಕ್ಟರ್ ಬಸವರಾಜ ಅವರು ಬೇಡಿಕೆ ಇಟ್ಟಿದ್ದರು. ವೈನ್ ಶಾಪ್ ಮಾಲೀಕ ಹನುಮಂತನಿಂದ ಒಂದು ಲಕ್ಷ ರೂ. ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ರೆಡ್ಹ್ಯಾಂಡ್ ಆಗಿ ಬಸವರಾಜ ಸಿಕ್ಕಿಬಿದ್ದಿದ್ದಾರೆ.
ನಿನ್ನೆ (ಫೆ.1) ಸಂಜೆ ಮಲ್ಲಟ ಬಳಿ ಲಂಚ ಪಡೆಯುವ ವೇಳೆ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಇನ್ಸ್ಪೆಕ್ಟರ್ ನಾಗರಾಜ ಮೇಕಾ ನೇತೃತ್ವದಲ್ಲಿ ದಾಳಿ ನಡೆದಿದೆ. ಸದ್ಯ ಇನ್ಸ್ಪೆಕ್ಟರ್ ಬಸವರಾಜನನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿ ವಿಚಾರಣೆಗೆ ಒಳಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)