ಮದ್ಯಪಾನ ಮಾಡಬೇಡಾ ಎಂದು ಬುದ್ದಿವಾದ ಹೇಳಿದ್ರೆ ಪ್ರಾಣ ಬಿಟ್ಟ ಯುವಕ

raichru
Published on

ರಾಯಚೂರು: ಪೋಷಕರ ಬುದ್ದಿಮಾತಿಗೆ ಮನನೊಂದು ಪುತ್ರ ನೇಣಿಗೆ  ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ  ಪಟ್ಟಣದಲ್ಲಿ  ನಡೆದಿದೆ.

24 ವರ್ಷದ ಆದರ್ಶ ಆತ್ಮಹತ್ಯೆಗೆ ಶರಣಾದ ಯುವಕ. ನಿತ್ಯ ಮದ್ಯಪಾನ ಮಾಡದಂತೆ ಬುದ್ದಿಹೇಳಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಯ ಬಾತ್ ರೂಮ್‌ನಲ್ಲಿದ್ದ ಕಬ್ಬಿಣದ ಪೈಪ್‌ಗೆ ಹಗ್ಗ ಹಾಕಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮಾನ್ವಿ ಪಟ್ಟಣದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ ಆದರ್ಶ. ಮದ್ಯವ್ಯಸನಿಯಾಗಿದ್ದನು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net